ಶಿಸ್ತು ಅಮೂಲ್ಯ ಗುಣ / A Article By ಅಕ್ಷತಾ ಅರಳಗುಂಡಗಿ. JMC STUDENT Sharanabasava University, Kalaburagi

‘ಶಿಸ್ತು’ ಎಂಬುದು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಮೂಖ ಅಂಶ. ಶಿಸ್ತಿಲ್ಲದವನ ಜೀವನ, ಆಣೆಕಟ್ಟು ಕಟ್ಟದ ನದಿ ನೀರಿನನಂತೆ ಚೆಲ್ಲಾಪಿಲ್ಲಿಯಾಗಿ ಹರಿದು ಹಾಳಾದಂತೆ. ಸಮಯಕ್ಕೆ ಸರಿಯಾಗಿ ಶಾಲೆ /ಕಚೇರಿಗಳಿಗೆ ಹೋಗುವುದು ಉತ್ತಮ ಬಟ್ಟೆ ಧರಿಸುವುದು, ಉತ್ತಮ ಆಚಾರ –ವಿಚಾರಗಳನ್ನ ಕಲಿಯುವ ಹಂಬಲ ಜೀವನದಲ್ಲಿರಬೇಕು, ತನ್ನನ್ನು ಬಣ್ಣಿಸುವುದು, ಪರರನ್ನ ನೀಂದಿಸುವುದನ್ನ ಬಿಟ್ಟು ವ್ಯವಸ್ಥಿತವಾದ ಜೀವನ, ಜನ ಮೆಚ್ಚುವ ಜೀವನಕ್ಕೆ ನಾವು ಉದಾಹರಣೆಯಾಗಬೇಕು.

ಇದು ಹೊಸ ಸಂಗತಿಯೇನಲ್ಲ, ಯಾರಿಗೂ ಗೊತ್ತಿಲ್ಲದು ಅಲ್ಲ. ಆದರೂ ಇದನ್ನ ಪಾಲಿಸುವವರ ಸಂಖ್ಯ ಅತೀ ವಿರಳ. ಗಾಳಿ ಬಿಟ್ಟಾಗ ತೂರಿಕೊಳ್ಳುವವನೆ ಜಾಣ ಎಂಬಂತೆ ಸ್ವಂತ ಲಾಭಕ್ಕಾಗಿ ಆಲಾಸ್ಯದಿಂದ ಶಿಸ್ಥಿನ ವ್ಯಾಪ್ತಿಯನ್ನು ಮೀರಿ ಬದುಕುತ್ತಾರೆ. ಮತ್ತು ಅವರಿಗೆ ಅದೇ ರೂಢಿಯೂ ಆಗಿರುತ್ತದೆ.

ಪಾಚ್ಛಾತ್ಯರ ಉಡುಗೆ ತೊಡುಗೆ, ಅವರ ಆಧುನಿಕತೆ ಮೆಚ್ಚುವ ಜನ ಅವರ ಕಾರ್ಯ ವೈಖರಿ ಮತ್ತು ಅವರು ನಿರಂತರ ಕೆಲಸ ಮಾಡುವ ವಿಧಾನ ಪಾಲಿಸುವುದಿಲ್ಲ ಪ್ರತಿಯೊಂದು ವ್ಯಕ್ತಿಯ, ಜನಾಂಗದ, ಗುಣಗಳ್ಳನ್ನು ಗುರುತಿಸಿ ಅವುಗಳ್ಳನ್ನು ನಮ್ಮ ಬದುಕಿಗೆ ಆಳವಡಿಸಿಕೊಳ್ಳುವುದೇ ಶಿಸ್ತಿನ ಜೀವನ, ಇದು ಕಷ್ಟ ಸಾಧ್ಯ. ಏಕೆಂದರೆ, ವ್ಯಕ್ತಿಯ ದೋಷಗಳ್ಳನ್ನು ಗುರುತಿಸಿ ಅವರ ಬಗ್ಗೆ ಟೀಕೆ ಮಾಡುವವರೇ ಹೆಚ್ಚು. ತನ್ನ ಎಲೆಯಲ್ಲಿ ಕತ್ತೆ ಬಿದ್ದಿದೆ ಎಂಬುದನ್ನು ಮರೆತು, ಇತರರ ಎಲೆಯಲ್ಲಿನ ನೊಣ ತೋರಿಸುವವರು ಎಂಬ ಗಾದೆಯಂತೆ ನಡೆಯುತ್ತಿದೆ. ತಾವು ಶ್ರೇಷ್ಠರು ಎಂದು  ಭಾವಿಸಿ, ಇತರರ ಅವಗುಣ ಆಡಿಕೊಳ್ಳುವವರು ಶಿಸ್ತಿನ ಪರೀದಿ ಮೀರುವವರು ಲೋಕಕ್ಕೆ ಭಾರ.

 

ಆದ್ದರಿಂದ ಜೀವನದಲ್ಲಿ ನಿಯಮಿತನ, ಸಮಯ ಪರಿಪಾಲನೆ, ಕರ್ತವ್ಯ ನಿಷ್ಠೆ, ಸಾರ್ಥಕ ಪ್ರವೃತ್ತಿ ಇತ್ತ್ಯಾದಿಗಳನ್ನು ರೂಢಿಸಿಕೊಂಡು ಅದನ್ನ ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಆದರೆ, ಈ ಗುಣಗಳು ಅಂಗಡಿಯಿಂದ ಹಣ ಕೊಟ್ಟು ಕೊಂಡುಕೊಳ್ಳುವಂತವುಗಳಲ್ಲ. ಇವುಗಳನ್ನು ಹಂತ ಹಂತವಾಗಿ ಪ್ರಯತ್ನ ಪೂರ್ವಕವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ರೀತಿ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳುವ ಪ್ರಯತ್ನಗಳೇ ನಮ್ಮ ಸರಳ ಜೀವನದ ದಾರಿಯಾಗುತ್ತವೆ..

 

 

ಬರಹ

ಅಕ್ಷತಾ ಅರಳಗುಂಡಗಿ

ಪತ್ರಿಕೋದ್ಯಮ ವಿದ್ಯಾರ್ಥಿನಿ

ಶರಣಬಸವ ವಿಶ್ವವಿದ್ಯಾಲಯ

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *