BJP: ಕೇರಳವೀಗ ಕೇಸರಿಮಯ: ಎಡ ಪಂಥ ತೊರೆದು ಬಿಜೆಪಿ ಸೇರಿದ 98 ಕಾರ್ಯಕರ್ತರು!
ತಿರುವನಂತಪುರಂ: ಎಡ ಪಂಥೀಯ ಪ್ರಾಬಲ್ಯವಿರುವ ಕೇರಳದಲ್ಲಿ ಇದೀಗ ಬಿಜೆಪಿ ನಿಧಾನವಾಗಿ ತಲೆ ಎತ್ತಲಾರಂಭಿಸಿದೆ. ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಎಡ ಪಂಥೀಯ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಸೇರಲಾರಂಭಿಸಿದ್ದಾರೆ.
ಸಿಪಿಐ(ಎಂ), ಸಿಪಿಐ(CPI) ಮತ್ತು ಸಿಐಟಿಯು ಪಕ್ಷಗಳು ಮಾಜಿ ಸದಸ್ಯರಾಗಿರುವ 98 ಕಾರ್ಯಕರ್ತರು ಮಂಗಳವಾರದಂದು ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ವಿ.ಮುರುಳೀಧರನ್ ಮತ್ತು ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ(Yogi Adityanath) ಪಕ್ಷದ ವಿಜಯ ಯಾತ್ರೆ ಆರಂಭಿಸಿದ್ದಾರೆ. ಅದೇ ಬೆನ್ನಲ್ಲೇ ರಾಜ್ಯಗಳ ಕೆಲ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಸೇರಲಾರಂಭಿಸಿದ್ದಾರೆ. ಈ ಹಿಂದೆ ಮೆಟ್ರೋ ಮ್ಯಾನ್ ಶ್ರೀಧರನ್ ಕೂಡ ವಿಜಯ ಯಾತ್ರೆ ಸಮಯದಲ್ಲಿಯೇ ಬಿಜೆಪಿ ಸೇರಿದ್ದರು.