ಹಿರೇನಾಗವೇಲಿ ಸ್ಫೋಟ ಪ್ರಕರಣದಲ್ಲಿ ನಮ್ಮ ಮಾವನ ಮಕ್ಕಳು ಯಾರೂ ಇಲ್ಲ: ಸಚಿವ ಸುಧಾಕರ್‌

ಚಿಕ್ಕಬಳ್ಳಾಪುರ: ಹಿರೇನಾಗವೇಲಿ ಸ್ಫೋಟ ಪ್ರಕರಣದಲ್ಲಿ ನಮ್ಮ ಮಾವನ ಮಕ್ಕಳು ಯಾರೂ ಇಲ್ಲ. ಘಟನೆ ನಡೆದ 24 ಗಂಟೆಯಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಹಿರೇನಾಗವೇಲಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳ ಬಂಧನದ ಬೆನ್ನಲ್ಲೇ ಈ ರೀತಿಯ ಹೇಳಿಕೆ ಸಚಿವ ಸುಧಾಕರ್‌ ನೀಡಿದ್ದಾರೆ. ಅಲ್ಲದೇ ಇತ್ತೀಚೆಗೆ ವಿಪಕ್ಷಗಳು ಅಕ್ರಮ ಕಲ್ಲು ಕ್ವಾರಿಗೆ ಸುಧಾಕರ್‌ ಬೆಂಬಲವಿದೆ ಎಂದು ಆರೋಪಿಸಿದ್ದರು.

ಪೊಲೀಸರ ದಾಳಿಗಳಿಂದ ಕ್ವಾರಿ ಮಾಲೀಕರಿಗೆ ಭಯ ಬಂದಿದೆ. ಹೀಗಾಗಿ ಸ್ಫೋಟಕಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಪೊಲೀಸರು ಇದನ್ನ ಮಟ್ಟಹಾಕಲು ಸತತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಸ್ಪೋಟಕ್ಕೆ ಸಂಬಂಧಪಟ್ಟ ಕ್ವಾರಿ ಮಾಲೀಕ ಹಾಗೂ ಪ್ರಮುಖ ಆರೋಪಿ ಬಿಜೆಪಿ ಮುಖಂಡ ಗುಡಿಬಂಡೆ ನಾಗರಾಜ್‌ನನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದರು.

ಇತರೆ ಆರೋಪಿಗಳಾದ ರಿಯಾಜ್ , ಮಧುಸೂದನ್ ರೆಡ್ಡಿ , ಪ್ರವೀಣ್ , ವೆಂಕಟೇಶ ರಡ್ಡಿ , ರಾಘವೇಂದ್ರ ರಡ್ಡಿ, ಗಣೇಶ್ ಮತ್ತು ವೆಂಕಟಶಿವರೆಡ್ಡಿಯನ್ನು ಬುಧವಾರ ಬಂಧಿಸಲಾಗಿತ್ತು. ಈ ಮೂಲಕ ತಲೆಮರೆಸಿಕೊಂಡಿದ್ದ ಎಲ್ಲ ಆರೋಪಿಗಳ ಬಂಧನವಾಗಿದೆ. ಇನ್ನು ಜಿಲೆಟಿನ್‌ ಸ್ಪೋಟದಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *