ಬಿಎಸ್ವೈ ಮನೆಯಲ್ಲಿ ಸಂಭ್ರಮ, ಮೊಮ್ಮಗಳ ಮದುವೆ ಖುಷಿಯಲ್ಲಿ ಸಿಎಂ
ಹೈಲೈಟ್ಸ್:
- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕುಟುಂಬದಲ್ಲಿ ಮದುವೆ ಸಂಭ್ರಮ
- ಬಿಎಸ್ವೈ ಎರಡನೇ ಪುತ್ರಿ ಅರುಣಾದೇವಿಯ ಮಗಳ ಅದ್ಧೂರಿ ಮದುವೆ
- ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮದುವೆಯಲ್ಲಿ ಬಿಎಸ್ವೈ ಭಾಗಿ
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಯಡಿಯೂರಪ್ಪನವರ ಪುತ್ರಿ ಅರುಣಾ ದೇವಿಯವರ ಮಗಳು ಮಾಧುರ್ಯ ಅವರ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ.
ಅರಮನೆ ಮೈದಾನ ಮೇಖ್ರಿ ಸರ್ಕಲ್ ಬಳಿಯ ತ್ರಿಪುರಾವಾಸಿನಿ ಗೇಟ್ ನಂ. 2 ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಹಾಗೂ ಬಿಎಸ್ ಯಡಿಯೂರಪ್ಪ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿಗಳಾದ ಬಿ ಎಸ್ ಯಡ್ಡಿಯೂರಪ್ಪನವರ ಎರಡನೇ ಪುತ್ರಿ ಅರುಣಾ ದೇವಿಯವರ ಮಗಳು ಮಾಧುರ್ಯ ಅವರು ನಿಖಿಲ್ ಎಂಬುವವರ ಜೊತೆ ಹಸೆಮನೆಗೆ ಏರಿದರು. ಬುಧವಾರ ಸಂಜೆ ಆರತಕ್ಷತೆ ಕಾರ್ಯಕ್ರಮವೂ ಅದ್ಧೂರಿಯಾಗಿ ನಡೆಯಿತು.
ವಿವಾಹ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್. ಶಂಕರ್, ಎಂಪಿ ಪ್ರತಾಪಸಿಂಹ, ಸೇರಿದಂತೆ ಶಾಸಕರು, ಸಂಸದರು ಭಾಗಿಯಾದರು.
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪುತ್ರಿ, ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರಿ ವಿವಾಹವೂ ಅದ್ಧೂರಿಯಾಗಿ ನಡೆದಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂಬುವುದನ್ನು ಸ್ಮರಿಸಬಹುದು.