ಬೆಂಗಳೂರಿನಲ್ಲಿ ತಪ್ಪಿದ ಭೀಕರ ಗ್ಯಾಂಗ್ ವಾರ್…! ರಾಜಧಾನಿಯಲ್ಲಿ ನೆತ್ತರು ಹರಿಸಲು ಬಂದಿತ್ತು ಮಂಗಳೂರು ಟೀಂ…!
ಬೆಂಗಳೂರಿನ ಸಿಸಿಬಿ ಪೊಲೀಸ್ರು ಸ್ವಲ್ಪ ಯಾಮಾರಿದ್ರು.. ರಾಜಧಾನಿ ಬೆಂಗಳೂರು ನಿನ್ನೆ ಭೀಕರ ಗ್ಯಾಂಗ್ ವಾರ್ ಒಂದಕ್ಕೆ ಸಾಕ್ಷಿಯಾಗಬೇಕಿತ್ತು. ಪೊಲೀಸ್ರ ಕ್ಷಿಪ್ರ ಕಾರ್ಯಾಚರಣೆ 14 ವರ್ಷದ ರಿವೇಂಜ್ ಕಿಚ್ಚನ್ನ ತಡೆ ಹಿಡಿದಿದೆ. ಯಾವುದು ಈ ರೈವಲ್ರಿ ಸ್ಟೋರಿ ಅಂತ ಗೊತ್ತಾಗಬೇಕಾದ್ರೆ ಈ ಸ್ಟೋರಿ ಓದಿ…
ಯೆಸ್ ಸಿಸಿಬಿ ಪೊಲೀಸ್ರು ಸ್ವಲ್ಪ ಯಾಮಾರಿದ್ರು ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಗ್ಯಾಂಗ್ ವಾರ್ ಒಂದಕ್ಕೆ ಸಾಕ್ಷಿಯಾಗಬೇಕಿತ್ತು. ಆದ್ರೆ ಸಿಸಿಬಿ ಪೊಲೀಸ್ರ ಕ್ಷಿಪ್ರ ಕಾರ್ಯಾಚರಣೆ 14 ವರ್ಷದ ರೈವಲ್ರಿ ವಾರ್ ನ್ನ ಸದ್ಯಕ್ಕೆ ತಪ್ಪಿಸಿದೆ. ಹೌದು ಮಾರತಹಳ್ಳಿಯ ಮೇಲಿನ ಹಿಡಿತಕ್ಕೆ ರೌಡಿಶೀಟರ್ ಸೋಮನ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಲು ಬಂದಿದ್ದ ರೋಹಿತ್ ಅಂಡ್ ಗ್ಯಾಂಗ್ ನ ಮಂಗಳೂರು ಮೂಲದ ಇಬ್ಬರು ರೌಡಿಶೀಟರ್ ಸೇರಿ ಐವರು ರೌಡಿಶೀಟರ್ ಗಳು ಹಾಗೂ ಆರು ಆರೋಪಿಗಳು ಸೇರಿ 11 ಜನರನ್ನ ಸಿಸಿಬಿ ಪೊಲೀಸ್ರು ಮಾರತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.
ಹೌದು ಮಾರತಹಳ್ಳಿ ಈ ರೈವಲ್ರಿ ಇವತ್ತು ನಿನ್ನೆಯದಲ್ಲ. ಬರೋಬ್ಬರಿ 14 ವರ್ಗಳಿಂದ ಇದು ನಡೆಯುತ್ತಿದೆ. ಯೆಸ್ ನಿನ್ನೆ ಅಟ್ಯಾಕ್ ಮಾಡಲು ಸಂಚು ರೂಪಿಸಿದ್ದ ರೋಹಿತ್ ಸಹೋದರ ದಿನೇಶ್ ನನ್ನ 2007 ರಲ್ಲಿ ಇದೇ ಸೋಮ ಹಾಗೂ ಅವನ ಅಣ್ಣ ಮಂಜ ಕೊಲೆ ಮಾಡಿದ್ರು. ಇದಕ್ಕೆ ಪ್ರತೀಕರಾವಾಗಿ 2017 ರಲ್ಲಿ ರೋಹಿತ್ ಸೋಮನ ಮೇಲ ಅಟ್ಯಾಕ್ ಮಾಡಿದ್ದ ಆದರೆ ಸೋಮ ಮಿಸ್ ಆಗಿ ಅವನ ಸಹಚರ ಗಿರಿ ಎಂಬಾತ ಸತ್ತಿದ್ದ. ಇದಾದ ಬಳಿಕವೂ ಸುಮ್ಮನಿರದ ರೋಹಿತ್ 2019 ರಲ್ಲಿ ಜೈಲಿನಿಂದಲೆ ಸುಪಾರಿ ನೀಡಿ ಸೋಮನ ಅಣ್ಣ ಮಂಜನನ್ನ ಫಿನಿಕ್ಸ್ ಮಾಲ್ ಎದಿರು ಹಾಡ ಹಗಲೆ ಕೊಲೆ ಮಾಡಿಸಿದ್ದ. ಈಗ ಜೈಲಿನಿಂದ ಬಂದ ರೋಹಿತ್ ಮಾರತಹಳ್ಳಿ ಮೇಲಿನ ಹಿಡಿತ ಹಾಗೂ ಅಣ್ಣ ಕೊಲೆಗೆ ರಿವೇಂಜ್ ತೀರಿಸಿಕೊಳ್ಳಲು ಸೋಮನ ಟೀಂ ಮೇಲೆ ಅಟ್ಯಾಕ್ ಮಾಡಲು ಸಂಚು ರೂಪಿಸಿದ್ದ. ಅದಕ್ಕಾಗಿ ಮಂಗಳೂರಿನ ನಟೋರಿಯಸ್ ರೌಡಿಶೀಟರ್ ಗಳಾದ ವಿಶ್ವನಾಥ್ ಭಂಡಾರಿ ಹಾಗೂ ಕಿರಣ್ ಮೂವರು ಸ್ಥಳಿಯ ರೌಡಿಶೀಟರ್ ಗಳು ಸೇರಿ ಹನ್ನೋಂದು ಜನರ ಟೀಂ ರೆಡಿಯಾಗಿತ್ತು.
ಸದ್ಯ ಸಿಸಿಬಿ ಪೊಲೀಸ್ರಿಂದ ಒಂದು ದೊಡ್ಡ ಗ್ಯಾಂಗ್ ವಾರ್ ತಪ್ಪಿದ್ದು, ಅಟ್ಯಾಕ್ ಪ್ಲಾನ್ ಮಾಡಿದ್ದ ರೋಹಿತ್ ಹಾಗೂ ಅಟ್ಯಾಕ್ ಆಗಬೇಕಿದ್ದ ಸೋಮ ಇಬ್ಬರು ತಲೆಮರೆಸಿಕೊಂಡಿದ್ದು ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.