3ನೇ ಟೆಸ್ಟ್: ರೋಹಿತ್ ಶರ್ಮಾ ಅರ್ಧಶತಕ, ಭಾರತ 99/3
ಅಹ್ಮದಾಬಾದ್: ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಹೊನಲು-ಬೆಳಕಿನ 3ನೇ ಟೆಸ್ಟ್ ಪಂದ್ಯದ ದಿನದಾಟ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಭಾರತ ಪರ “ಹಿಟ್ ಮ್ಯಾನ್” ರೋಹಿತ್ ಶರ್ಮಾ ಆಕರ್ಷಕ ಅರ್ಧ ಶತಕ ( 57*) ಸಿಡಿಸಿದ್ದಾರೆ.
ಸಧ್ಯ ರೋಹಿತ್ ಶರ್ಮಾ ಜತೆಗೆ ಮೂರು ಬಾಲ್ ಗೆ ಒಂದು ರನ್ ಗಳಿಸಿರುವ ಅಜಿಂಕ್ಯ ರಹಾನೆ ಕಣದಲ್ಲಿದ್ದಾರೆ.
ಇಂಗ್ಲೇಂಡ್ ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಗೆ ಆಲೌಟ್ ಆದ ನಂತರ ಬ್ಯಾಟಿಂಗ್ ಪ್ರಾರಂಭಿಸಿದ ಭಾರತ ಪ್ರಾರಂಭದಲ್ಲೇ ಶುಭ್‌ಮನ್ ಗಿಲ್ ಹಾಗೂ ಪೂಜಾರಾ ವಿಕೆಟ್ ಕಳೆದುಕೊಂಡಿತ್ತು.
ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದವರು 27 ರನ್ ಗಳಿಸಿದ್ದಾಗ ಲೀಚ್ ಎಸೆತಕ್ಕೆ ಔಟಾಗಿದ್ದಾರೆ.
ದಿನದಂತ್ಯದಲ್ಲಿ ಭಾರತ 13 ರನ್ ಗಳ ಅಲ್ಪ ಹಿನ್ನಡೆ ಅನುಭವಿಸಿದೆ.