ಟೀಂ ಇಂಡಿಯಾದ ಇಬ್ಬರು ಮಾಜಿ ಕ್ರಿಕೆಟಿಗರು ರಾಜಕೀಯಕ್ಕೆ ಎಂಟ್ರಿ
ಟೀಂ ಇಂಡಿಯಾ ಮಾಜಿ ಆಟಗಾರರಾದ ಮನೋಜ್ ತಿವಾರಿ ಹಾಗೂ ಅಶೋಕ್ ದಿಂಡಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಈ ಚುನಾವಣೆ ಮೂಲಕ ಇಬ್ಬರೂ ಹೊಸ ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದಾರೆ.
2008ರಲ್ಲಿ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರೆ ಇತ್ತೀಚೆಗೆ ಎಲ್ಲಾ ಮದರಿಯ ಕ್ರಿಕೆಟಿಗೆ ವಿದಾಯ ಹೇಳಿದ್ದ ದಿಂಡಾ ಬಿಜೆಪಿ ಪಾಳಯಕ್ಕೆ ಸೇರಿದ್ದಾರೆ.
ಮನೋಜ್ ತಿವಾರಿ ಇಂದು ಮಧ್ಯಾಹ್ನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದರೆ ಸಂಜೆ ಹೊತ್ತಿಗೆ ಅಶೋಕ್ ದಿಂಡಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.