Bigg Boss 8: ಬಿಗ್ ಬಾಸ್ ಅಂಗಳದಲ್ಲಿ ಮತ್ತೆ ಕೇಳಿ ಬಂತು ಹುಚ್ಚ ವೆಂಕಟ್ ಹೆಸರು: ಸುದೀಪ್ ಹೇಳಿದ್ದು ಹೀಗೆ..!
ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್ ತಮ್ಮ ವರ್ತನೆಯ ಕಾರಣದಿಂದಾಗಿ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರ ಬರಬೇಕಾಯಿತು. ಆದರೆ, ಈಗ ಮತ್ತೆ ಬಿಗ್ ಬಾಸ್ 8 ಆರಂಭವಾಗಲಿದೆ. ಈಗ ಮತ್ತೆ ಹುಚ್ಚ ವೆಂಕಟ್ ಹೆಸರು ಕೇಳಿ ಬರುತ್ತಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)

ಇನ್ನೇನು ಇದೇ ಭಾನುವಾರ ಬಿಗ್ ಬಾಸ್ 8 ಅದ್ಧೂರಿಯಾಗಿ ಲಾಂಚ್ ಆಗಲಿದೆ. ಅದಕ್ಕೂ ಮೊದಲು ಕಿಚ್ಚ ಸುದೀಪ್ ಹಾಗೂ ಕಾರ್ಯಕ್ರಮದ ಪರಮೇಶ್ವರ್ ಗುಂಡ್ಕಲ್ ನಿನ್ನೆ ಸುದ್ದಿಗೋಷ್ಠಿ ಆಯೋಜಿಸಿದ್ದರು.

ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಮಾಡಿದ್ದ ಈ ಸುದ್ದಿಗೋಷ್ಠಿಯಲ್ಲಿ ಈ ಸಲವೂ ಹುಚ್ಚ ವೆಂಕಟ್ ಹೆಸರು ಹೇಳಿ ಬಂತು.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಾ ಸುದೀಪ್ ಹುಚ್ಚ ವೆಂಕಟ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ.

ಹುಚ್ಚ ವೆಂಕಟ್ ಅವರು ಈ ಸಲವೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಲಿದ್ದಾರಾ ಅನ್ನೋ ಅನುಮಾನ ಕಾಡಲಾರಂಭಿಸಿದೆಯಾ..?

ಅಷ್ಟಕ್ಕೂ ಸುದೀಪ್ ಹುಚ್ಚ ವೆಂಕಟ್ ಹೆಸರನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಲು ಕಾರಣ ಇದೆ.

ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್ ತಮ್ಮ ವರ್ತನೆಯ ಕಾರಣದಿಂದಾಗಿ ಅರ್ಧಕ್ಕೆ ಕಾರ್ಯಕ್ರಮದಿಂದ ಹೊರ ಬರಬೇಕಾಯಿತು.

ಹಾಗೆ ಆಗದಿದ್ದರೆ, ಅವರೇ ಸೀಸನ್ 3ರಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿತ್ತು. ಹುಚ್ಚ ವೆಂಕಟ್ ಹೊರ ಬೀಳುವ ಹಿಂದನ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಈ ಮಾತನ್ನು ಪರಮೇಶ್ವರ್ ಅವರಿಗೆ ಹೇಳಿದ್ದರಂತೆ.

ಹುಚ್ಚ ವೆಂಕಟ್ ಅವರಿಗೆ ಅಷ್ಟು ದೊಡ್ಡ ಪ್ರಮಾಣದಲ್ಲಿ ವೋಟಿಂಗ್ ಆಗುತ್ತಿತ್ತು ಎಂದು ಕಿಚ್ಚ ಸುದೀಪ್ ನಿನ್ನೆ ನಡೆದ ಸುದ್ಧಿಗೋಷ್ಠಿಯಲ್ಲಿ