ಗಾಣಗಾಪುರ ದತ್ತಾತ್ರೇಯ ಮಾಘಮಾಸ ಉತ್ಸವ ಸರಳ ಆಚರಣೆಗೆ DC ಆದೇಶ

ಕಲಬುರಗಿ: ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಆತಂಕ ಹೆಚ್ಚಾಗಿದೆ. ಈ  ಹಿನ್ನೆಲೆಯಲ್ಲಿ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯನ ಮಾಘ ಮಾಸ ಉತ್ಸವವನ್ನು ಸರಳವಾಗಿ ಆಚರಿಸಲು ಜಿಲ್ಲಾಧಿಕಾರಿ ವಿ ಜೋತ್ಸ್ನಾ ಆದೇಶಿಸಿದ್ದಾರೆ.

ಪ್ರತಿ ವರ್ಷ ದತ್ತಾತ್ರೇಯ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮಾಘಮಾಸ ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಸಮಯಲ್ಲಿ ಕೊರೊನಾ ಹರಡುವ ಅವಕಾಶವಿರುವುದರಿಂದ ಜಿಲ್ಲಾಧಿಕಾರಿಗಳು ಈ ರೀತಿ ಆದೇಶ ಹೊರಡಿಸಿದ್ದಾರೆ. ಉತ್ಸವದ ಸಂದರ್ಭದಲ್ಲಿ ಅತಿಥಿಗೃಹಗಳು ಮತ್ತು ಲಾಡ್ಜ್​ಗಳನ್ನು ಬಂದ್​ ಮಾಡುವಂತೆ ಸೂಚಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *