ರಾಜ್ಯದಲ್ಲಿ ಬಡವರಿಗೆ ಸಿಗುತ್ತೆ ಉಚಿತ ಮರಳು…! ಮರಳು ಸಮಸ್ಯೆ ನೀಗಿಸಲು ನಿರಾಣಿ ಹೊಸ ಪ್ಲಾನ್…!
ರಾಜ್ಯದಲ್ಲಿ ಉಂಟಾಗಿರೋ ಮರಳಿನ ಸಮಸ್ಯೆ ಬಗೆ ಹರಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದಾರೆ. ಅದರಲ್ಲೂ ಬಡವರಿಗೆ ಉಚಿತ ಮರಳು ನೀಡಲು ಸಚಿವರು ಚಿಂತನೆ ನಡೆಸಿದ್ದಾರೆ. ಫ್ರೀ ಸ್ಯಾಂಡ್ ಪಾಲಿಸಿ ತರಲು ಚಿಂತನೆ ನಡೆದಿದೆ ಎಂದು ಕೊಪ್ಪಳದಲ್ಲಿ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹೊಸ ಮರಳು ನೀತಿ ಸರಳೀಕರಣದ ಅಧ್ಯಯನ ಆಗ್ತಿದೆ. ರೈತರು, ಆಶ್ರಯ ಮನೆ, ಸಣ್ಣ ಮನೆ ನಿರ್ಮಾಣ ಮಾಡುವವರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಮನ ಹರಿಸಿದೆ. 10 ಲಕ್ಷ ರೂಪಾಯಿ ಒಳಗಿನ ಕಟ್ಟಡ ನಿರ್ಮಾಣಕ್ಕಾಗಿ ಒಂದು ಟನ್ ಮರಳಿಗೆ 100 ರೂಪಾಯಿ ನಿಗದಿಗೊಳಿಸಲಾಗುವುದು.
ದೊಡ್ಡ ಕಟ್ಟಡ, ಗುತ್ತಿಗೆದಾರರು, ಸರ್ಕಾರಿ ಕಟ್ಟಡ, ಅಪಾರ್ಟ್ಮೆಂಟ್, ಬಂಗಲೆ ನಿರ್ಮಾಣ ಬೆಲೆ ನಿಗದಿ ಮಾಡಲಾಗುತ್ತೆ. ಸರ್ಕಾರಿ ಕಟ್ಟಡ ಕಟ್ಟುವವರು ಮೊದಲಿನಂತೆ ಅಂತಿಮ ಬಿಲ್ ಪಾವತಿಸುವ ವೇಳೆ ಮರಳಿನ ಮೊತ್ತ ಪಾವತಿಸಬೇಕು ಎಂದು ನಿರಾಣಿ ಹೇಳಿದ್ದಾರೆ.