ಹೆಚ್.ಕೆ.ಇ.ಗೆ ಬಿಲಗುಂದಿ ಪುನರಾಯ್ಕೆ 143 ಮತಗಳ ಗೆಲವು

ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಿನ್ನೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಸಂಸ್ಥೆಗೆ ಎರಡನೇ ಅವಧಿಗೆ ಭೀಮಾಶಂಕರ ಬಿಲಗುಂದಿ ಅವರು ಪುನರಾಯ್ಕೆಯಾಗಿದ್ದಾರೆ.
ಒಟ್ಟು 1575 ಮತದಾರರು ಹೊಂದಿದ ಈ ಸಂಸ್ಥೆಯ ಚುನಾವಣೆಯಲ್ಲಿ 1465 ಸದಸ್ಯರು ಮತದಾನ ಮಾಡಿದ್ದರು.
ಬೆಳಿಗ್ಗೆ 11 ಗಂಟೆಗೆ ಆರಂಭವಾದ ಮತ ಏಣಿಕೆ ಕಾರ್ಯ ರಾತ್ರಿ 11.05ಕ್ಕೆ ಪೂರ್ಣಗೊಂಡಿತು ಎಂದು ಚುನಾವಣಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಿತೇಶ ಸೂಗುರ ಅವರು ತಿಳಿಸಿದ್ದಾರೆ.
ಮತ ಏಣಿಕೆಯ ಆರಂಭದಿAದಲೂ ಭೀಮಾಶಂಕರ ಬಿಲಗುಂದಿ ಅವರು ಮುನ್ನಡೆ ಕಾಯ್ದುಕೊಂಡಿದ್ದು, ಕೊನೆಯ ವರೆಗೂ ಮುನ್ನಡೆ ಸಾಧಿಸುವುದರೊಂದಿಗೆ ಅಂತಿಮವಾಗಿ ಗೆಲುವಿನ ಮೆಟ್ಟಿಲು ತಲುಪಿದರು.
ಒಂದು ಸುತ್ತಿನಲ್ಲೂ ಎದುರಾಳಿ ಅಭ್ಯರ್ಥಿಗಳು ಮುನ್ನಡೆ ಸಾಧಿಸದೆ ಸುಮಾರು 20 ರಿಂದ 100ರ ವರೆಗೆ ಹಿನ್ನಡೆ ಸಾಧಿಸಿದ ಭೀಮಳ್ಳಿ ಅವರು ಕೊನೆಯ ವರೆಗೂ ಬಿರುಸಿನ ಪೈಪೋಟಿ ನೀಡಿದ್ದು, ಕೊನೆಯಲ್ಲಿ ಅವರು 143 ಮತಗಳ ಅಂತದಿAದ ಪರಾಭವಗೊಂಡರು. ಕಳೆದ ಬಾರಿಯ ಚುನಾವಣೆಯಲ್ಲಿ ಭೀಮಳ್ಳಿ ಅವರು 130 ಮತಗಳ ಅಂತರದಿAದ ಸೋಲು ಕಂಡಿದ್ದರು. ಭೀಮಳ್ಳಿ ಅವರಿಗೆ 477 ಮತಗಳು ಬಂದವು
ಕಳೆದ ಬಾರಿ ಬಿಲಗುಂದಿ ಅವರಿಗೆ ಈಗಿನ ಪ್ರತಿಸ್ಪರ್ಧಿ ಶಶೀಲ್ ನಮೋಶಿ ಸೇರಿದಂತೆ ಡಾ. ಜವಳಿ, ಮಾಜಿ ಸಚಿವ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಎ. ಬಿ. ಮಲಕರೆಡ್ಡಿ ಅವರು ಸಂರ್ಪೂಣ ಬೆಂಬಲ ನೀಡಿದ್ದರು.
ಈ ಬಾರಿ ಚುನಾವಣೆಗೆ ಧುಮುಕಿದ ನಮೋಶಿ ಅವರು ತೃತೀಯ ಸ್ಥಾನಕ್ಕೆ ತಲುಪಿದ್ದಾರೆ.
ಅಂತಿಮವಾಗಿ ಭೀಮಾಶಂಕರ ಬಿಲಗುಂದಿ ಅವರು 620 ಮತಗಳನ್ನು ಗಳಿಸುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಸವರಾಜ ಭೀಮಳ್ಳಿ ಅವರರನ್ನು 143 ಮತಗಳ ಅಂತರದಿAದ ಪರಾಭವಗೊಳಿಸಿದರು.
ಶಶೀಲ್ ನಮೋಶಿ ಅವರು 323 ಮತಗಳನ್ನು ಪಡೆದರು.
ಭೀಮಳ್ಳಿ ಪೆನಾಲ್‌ನಿಂದ ಉಪಾಧ್ಯಕ್ಷರಾಗಿ ಡಾ. ಶರಣಬಪಸ್ಪ ಹರವಾಳ ಅವರು ಅತಿಹೆಚ್ಚು ಅಂದರೆ 450 ಅಧಿಕ ಮತಗಳ ಅಂತರ ದಿಂದ ಜಯಗಳಿಸಿದ್ದಾರೆ. (887) ಅವರ ಪ್ರತಿಸ್ಪರ್ಧಿ ಡಾ. ಶಿವಾನಂದ ದೇವರಮನಿ ಅವರನ್ನು 475 ಮತಗಳಿಂದ ಸೋಲಿಸಿದ್ದು, ದೇವರಮನಿ ಅವರಿಗೆ 372 ಮತ್ತು ಆರ್. ಎಸ್. ಹೊಸಗೌಡರಿಗೆ 226 ಮತಗಳು ಬಂದವು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಹಾದೇವಪ್ಪ ವಾಯ್. ರಾಂಪುರೆ (787), ಡಾ. ನಾಗೇಂದ್ರ ಎಸ್. ಮಂಠಾಳೆ (680), ಅರುಣಕುಮಾರ ಎಂ. ಪಾಟೀಲ್ (649), ಸಾಯಿನಾಥ ಎನ್.ಡಿ. ಪಾಟೀಲ್ (516), ಎನ್. ಗಿರೀಜಾಶಂಕರ (534), ಡಾ. ರಜನೀಶ ಎಸ್. ವಾಲಿ (544) ಬೀದರ, ವಿನಯ ಎಸ್. ಪಾಟೀಲ (570) ಅವರುಗಳು ಆಯ್ಕೆಯಾಗಿದ್ದಾರೆ.
ಭೀಮಾಶಂಕರ ಬಿಲಗುಂದಿ ಅವರ ಪೆನಾಲ್‌ನಿಂದ 5 ಜನರು ಆಯ್ಕೆಯಾಗಿದ್ದು, ಡಾ.ಶರಣಬಸಪ್ಪ ಕಾಮರೆಡ್ಡಿ (688), ಅರುಣಕುಮಾರ ಎಂ. ಪಾಟೀಲ್ (649), ಬಸವರಾಜ ಜೆ. ಖಂಡೇರಾವ (687), ಸೋಮನಾಥ ಸಿ. ನಿಗ್ಗುಡಗಿ (567), ಡಾ. ಕೈಲಾಸ ಬಿ. ಪಾಟೀಲ್ (581), ಡಾ. ಜಗನ್ನಾಥ ಬಿ. ಬಿಜಾಪೂರ (524),
ಇನ್ನು ಶಶೀಲ್ ನಮೋಶಿ ಪೆನಾಲ್‌ನಿಂದ ಡಾ. ಅನೀಲಕುಮಾರ ಬಿ. ಪಟ್ಟಣ (536), ಆಯ್ಕೆಯಾದ ಏಕಮೇವ ಸದಸ್ಯರಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಲಗುಂದಿ ಪೆನಾಲ್‌ನ ಡಾ. ಶಿವಾನಂದ ದೇವರಮನಿ (372) ಹಾಗೂ ನಮೋಶಿ ಪೆನಾಲ್‌ನಿಂದ ಸ್ಪರ್ಧಿಸಿದ್ದ ಆರ್. ಎಸ್. ಹೊಸಗೌಡ (226) ಅವರುಗಳು ಹೀನಾಯ ಸೋಲನ್ನುಪ್ಪಿದ್ದು, ಉಪಾಧ್ಯಕ್ಷ ಸ್ಥಾನ ಭೀಮಳ್ಳಿ ಪೆನಾಲ್ ಒಲಿದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *