ರಮೇಶ್​ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಗೋಕಾಕ್​ ಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿ ಬೆಂಬಲಿಗರು ಅವರ ರಾಜೀನಾಮೆಯನ್ನು ಖಂಡಿಸಿದ್ದಾರೆ.

ಗೋಕಾಕ್​ (ಮಾರ್ಚ್​ 03); ಬಿಜೆಪಿ ಪಕ್ಷದ ಕ್ಯಾಬಿನೆಟ್​ ಸಚಿವ ರಮೇಶ್​ಜಾರಕಿಹೊಳಿ ಅವರ ಅಶ್ಲೀಲ ವಿಡಿಯೋ ನಿನ್ನೆ ಸಂಜೆ 5 ಗಂಟೆಗೆ ಬಿಡುಗಡೆಯಾಗಿತ್ತು. ಎಲ್ಲಾ ಮಾಧ್ಯಮಗಳಲ್ಲೂ ಈ ಸುದ್ದಿ ದೊಡ್ಡ ಮಟ್ಟದ ಸದ್ದು ಮಾಡುತ್ತಲೇ ಇದೆ. ಹೀಗಾಗಿ ಕಾಂಗ್ರೆಸ್​ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಮಹಿಳಾ ಸಂಘಟನೆಗಳೂ ಸಚಿವ ರಮೇಶ್​ ಜಾರಕಿಹೊಳಿ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಸ್ವತಃ ರಮೇಶ್​ ಜಾರಕಿಹೊಳಿ ಅವರ ರಾಜೀನಾಮೆ ಕೇಳಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ರಮೇಶ್​ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಗೋಕಾಕ್​ ಕ್ಷೇತ್ರದಲ್ಲಿ ರಮೇಶ್​ ಜಾರಕಿಹೊಳಿ ಬೆಂಬಲಿಗರು ಅವರ ರಾಜೀನಾಮೆಯನ್ನು ಖಂಡಿಸಿದ್ದಾರೆ. ಸಿಎಂ ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಒತ್ತಾಯಪೂರ್ವಕವಾಗಿ ಗೋಕಾಕ್​ ಬಂದ್​ ಮಾಡಲು ಮುಂದಾಗಿದ್ದಾರೆ.

ಸೆಕ್ಸ್​ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಸಿಎಂ ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡುತ್ತಿದ್ದಂತೆ ಬೆಳಗಾವಿಯ ಗೋಕಾಕ್​ನಲ್ಲಿ ಅವರ ಬೆಂಬಲಿಗರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಯಡಿಯೂರಪ್ಪನವರು ಸಚಿವರ ರಾಜೀನಾಮೆ ಸ್ವೀಕರಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೈನಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ಬೆದರಿಕೆ ಒಡ್ಡುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *