ಸಿಡಿ ನೋಡುವುದಕ್ಕೆ ನನಗೆ ಅಸಹ್ಯವಾಗುತ್ತೆ ,ಇಂಥ ಮಾನಗೆಟ್ಟ ಸರ್ಕಾರ ಬೇಕಾ-ಸಿದ್ದರಾಮಯ್ಯ
ರಾಸಲೀಲೆ ಸಿಡಿ ಪ್ರಕರಣದ ವಿರುದ್ಧ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನ ಕೂಗಿದ್ದಾರೆ. ರಾಸಲೀಲೆ ಸಿಡಿ ಪ್ರಕರಣದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣವಾಗಿ ಮಾತನಾಡಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆ ಸಚಿವನ ಸಿಡಿ ನೋಡುವುದಕ್ಕೆ ನನಗೆ ಅಸಹ್ಯವಾಗುತ್ತೆ. ಹೇಳುವುದಕ್ಕೂ ನಾಚಿಕೆಯಾಗುತ್ತೆ. ಈಗ ಆ ಸಚಿವ ರಾಜೀನಾಮೆ ಕೊಟ್ಟಿದ್ದಾನಂತೆ. ಆದರೆ ಆತನ ಸಹೋದರ ಸಿಎಂ ಬಳಿ ನಮ್ಮ ಅಣ್ಣನ ರಾಜೀನಾಮೆ ಪಡೆದುಕೊಂಡ್ರೆ ನಿಮ್ಮ ಸಿಡಿ ರಿಲೀಸ್ ಮಾಡ್ತೀನಿ ಎಂದು ಹೇಳ್ತಾನಂತೆ. ಇಂಥ ಮಾನಗೆಟ್ಟ ಸರ್ಕಾರ ಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.