ಈ ವಿಮಾನ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುತ್ತಂತೆ..! ಉಡುಪಿಯ ಯುವಕರಿಂದ ತಯಾರಾಯ್ತು ಹೊಸ ಮಾದರಿಯ ವಿಮಾನ…!
ನಮ್ಮಲ್ಲಿ ಮೇಕ್ ಇನ್ ಇಂಡಿಯಾ. ಆತ್ಮ ನಿರ್ಭರದ ಚರ್ಚೆ ಜೋರಾಗಿ ನಡೆಯುತ್ತಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀ ಪ್ಲೈನನ್ನು ಸಿದ್ಧ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀ ಪ್ಲೈನ್ ನ ಯಶಸ್ವಿ ಹಾರಾಟ ಕೂಡಾ ನಡೆದಿದ್ದು, ರಾಜ್ಯ, ಕೇಂದ್ರ ಸರಕಾರದ ಸಹಾಯಕ್ಕೆ ಉತ್ಸಾಹಿ ಎಂಟು ಯುವಕರು ಕಾಯುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಭಾರತದ ಮೊದಲ ಸೀ ಪ್ಲೈನ್ ಉದ್ಘಾಟಿಸಿದ್ರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಹಾಗೆಯೇ ಸದ್ಯ ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಮೈಕ್ರೋಲೈಟ್ ಸೀ ಪ್ಲೈನ್ ಯಶಸ್ವಿಯಾಗಿ ಹಾರಾಟ ನಡೆಸಿದೆ. ಏರ್ ಮಾಡೆಲಿಂಗ್, ಎನ್ಸಿಸಿ ಇನ್ ಸ್ಟ್ರಕ್ಟರ್ ಆಗಿರುವ ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ 15 ವರ್ಷಗಳ ಕಾಲ ಪರಿಶ್ರಮ ಪಟ್ಟು ಮೈಕ್ರೋಲೈಟ್ ಸೀ ಪ್ಲೈನ್ ಸಿದ್ಧಪಡಿಸಿದ್ದಾರೆ. ಧೃತಿ ಅನ್ನೋ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ರೆಡಿ ಮಾಡಿದ್ದಾರೆ.
ರಿಮೋಟ್ ಕಂಟ್ರೋಲ್ ಹೊಂದಿರೋ ಈ ವಿಮಾನ 190 ಕೆಜಿ ಭಾರ ಹೊತ್ತೊಯ್ಯಲಿದೆ. ಏರ್ಕ್ರಾಫ್ಟ್ ಗ್ರೇಡ್ ಅಲುಮೀನಿಯಂ, ಸ್ಟೀಲ್ಗಿಂತ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲಾತ್, 33 ಎಚ್ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್ ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಓಡಿ ಆಗಸದಲ್ಲಿ ಹಾರುತ್ತದೆ. ಈ ವಿಮಾನಕ್ಕೆ ಸುಮಾರು ಏಳು ಲಕ್ಷ ರುಪಾಯಿ ಖರ್ಚಾಗಿದೆ.