ಮಾರುಕಟ್ಟೆಗೆ ಹೊಸ ಮೊಬೈಲ್ ಎಂಟ್ರಿ..! ಉತ್ತಮ ಫಿಚರ್ಸ್ನೊಂದಿಗೆ ಆಕರ್ಷಕ ಬೆಲೆಯಲ್ಲಿ ಸಿಗತ್ತೆ ಈ ಮೊಬೈಲ್..!
ಮೊಬೈಲ್ ಹಾಳಾಗಿದೆ ಹೊಸ ಮೊಬೈಲ್ ತಗೊಬೇಕು ಅಂತ ಯಾರಾದ್ರು ಯೋಚನೆ ಮಾಡ್ತಿದ್ರೆ, ಮಾರುಕಟ್ಟೆಗೆ ಹೊಸ ಮೊಬೈಲ್ ಎಂಟ್ರಿ ಕೊಟ್ಟಿದೆ. ಯಾವ ಮೊಬೈಲ್..? ಅದರ ಫಿಚರ್ಸ್ ಏನು..? ಅಂತ ತಿಳಿಬೇಕಾ ಈ ಸ್ಟೋರಿನ ಪೂರ್ತಿಯಾಗಿ ಓದಿ.
ಭಾರತದ ಮಾರುಕಟ್ಟೆಯಲ್ಲಿ ರೆಡ್ಮಿ ತನ್ನದೇ ಆದ ಹವಾ ಕ್ರಿಯೆಟ್ ಮಾಡಿದೆ. ಆದ್ರಿಗ ಹೊಸ ಮಾದರಿಯಲ್ಲಿ ಹಲವು ಫಿಚರ್ನೊಂದಿಗೆ ರೆಡ್ಮಿ ಮತ್ತೆ ಲಗ್ಗೆ ಇಟ್ಟಿದೆ. ರೆಡ್ಮಿ ನೋಟ್ 10, ರೆಡ್ಮಿ ನೋಟ್ 10 ಪ್ರೋ, ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್ ಗುರುವಾರ ಲಾಂಚ್ ಆಗಿದೆ. ಕಳೆದ ವರ್ಷ ರಿಲೀಸ್ ಆಗಿದ್ದ ರೆಡ್ಮಿ ನೋಟ್ 9 ಭಾರತದಲ್ಲಿ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ರೆಡ್ಮಿ ನೋಟ್ 10 series ರಿಲೀಸ್ ಮಾಡಿದೆ. ಈ ಸೀರೀಸ್ ಮೊಬೈಲ್ಗಳಲ್ಲಿ AMOLED ಡಿಸ್ಪ್ಲೇ ಇರೋದು ವಿಶೇಷ. ರೆಡ್ಮಿ ನೋಟ್ 10 ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. ರಿಫ್ರೆಶ್ ರೇಟ್ 60Hz ಮತ್ತು 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 13 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಇದು ಹೊಂದಿದೆ. ಇದರ ಜತೆಗೆ, 6.43 ಇಂಚಿನ ಎಚ್ಡಿ ಡಿಸ್ಪ್ಲೇ ಇದೆ.
ರೆಡ್ಮಿ ನೋಟ್ 10 ಪ್ರೋ ಹಾಗೂ ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್ ರಿಫ್ರೆಶ್ ರೇಟ್ 120Hz ಇದ್ದು, 108 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದೆ. ರೆಡ್ಮಿ ನೋಟ್ 10 ಸೀರಿಸ್ 33ಡಬ್ಲ್ಯು ವೇಗದ ಚಾರ್ಜಿಂಗ್ ಮತ್ತು ಭವಿಷ್ಯದಲ್ಲಿ MIUI 12.5 ಸಾಫ್ಟ್ವೇರ್ ಅಪ್ಡೇಟ್ ಆಯ್ಕೆ ಸಿಗಲಿದೆ.
ಭಾರತದ ಮಾರುಕಟ್ಟೆಯಲ್ಲಿ ಬೆಲೆ Redmi Note 10, 4GB RAM + 64GB ಸ್ಟೋರೆಜ್ ಇರುವ ರೆಡ್ಮಿ ನೋಟ್ 10 ಬೆಲೆ ಭಾರತದಲ್ಲಿ 11,999 ರೂಪಾಯಿ. 6GB RAM + 128GB ಸ್ಟೋರೆಜ್ ಮಾಡೆಲ್ಗೆ 13,999 ರೂಪಾಯಿ. ಅಕ್ವಾ ಹಸಿರು, ಫ್ರಾಸ್ಟ್ ವೈಟ್ ಮತ್ತು ಶ್ಯಾಡೋ ಕಪ್ಪು ಬಣ್ಣದ ಆಯ್ಕೆ ಸಿಗಲಿದೆ.
Redmi Note 10 Pro 6GB RAM + 64GB ಸ್ಟೋರೆಜ್ 15,999 ರೂಪಾಯಿ. 6GB RAM + 128GB ಸ್ಟೋರೆಜ್ 16,999. 8GB RAM + 128GB ಸ್ಟೋರೆಜ್ 18,999 ರೂಪಾಯಿ ಇರಲಿದೆ. Redmi Note 10 Pro Max 6GB RAM + 64GB ಸ್ಟೋರೆಜ್ 18,999 ರೂಪಾಯಿ. 6GB RAM + 128GB ಸ್ಟೋರೆಜ್ 19,999 ರೂಪಾಯಿ. 8GB RAM + 128GB ಸ್ಟೋರೆಜ್ 21,999 ರೂಪಾಯಿಗೆ ದೊರೆಯಲಿದೆ. ಭಾರೀ ಡಿಸ್ಕೌಂಟ್ ಬೇಕಾದವರು ಆನ್ಲೈನ್ಲ್ಲಿ ಮೊಬೈಲ್ ಖರೀದಿ ಮಾಡಿದರೆ ನಿಮಗೆ ಡಿಸ್ಕೌಂಟ್ ಸಿಗಲಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಮೊಬೈಲ್ ಖರೀದಿಸಿದರೆ ಗರಿಷ್ಠ 1,500 ರೂಪಾಯಿವರೆಗೆ ಡಿಸ್ಕೌಂಟ್ ಪಡೆಯಬಹುದು ಎಂದು ತಿಳಿದುಬಂದಿದೆ.