ಇಂದು ತೆರೆಮೇಲೆ ‘ಹೀರೋ’ ರಿಷಬ್ ಶೆಟ್ಟಿ ಕಾರುಬಾರು..!
ರಿಷಬ್ ಶೆಟ್ಟಿ ನಿರ್ಮಿಸಿ, ನಟಿಸಿರೋ ಬಹನಿರೀಕ್ಷಿತ ‘ಹೀರೋ’ ಸಿನಿಮಾ ಇಂದು ತೆರೆಗೆ ಬರ್ತಿದೆ. ಲಾಕ್ಡೌನ್ ಸಮಯದಲ್ಲೇ ಸಿನಿಮಾ ಶೂಟಿಂಗ್ ಮಾಡಿ ಮುಗಿಸಿದ್ದ ರಿಷಬ್ ಶೆಟ್ಟಿ, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇದೀಗ ಚಿತ್ರವನ್ನ ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ಬರೀ ಟ್ರೈಲರ್ನಿಂದ್ಲೇ ಹೀರೋ ಸಿನಿಮಾ ಇನ್ನಿಲ್ಲದ ಕುತೂಹಲ ಮೂಡಿಸಿದೆ.
ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿರೋ ಪೊಗರು, ಮುಂದಿನ ವಾರ ಬರ್ತಿರೋ ರಾಬರ್ಟ್ ನಡುವೆ ಈ ವಾರ ಹೀರೋ ಸಿನಿಮಾ ರಿಲೀಸ್ ಆಗ್ತಿದೆ. ಲಾಕ್ಡೌನ್ ನಡುವೆಯೇ ರಿಷಬ್ ಶೆಟ್ಟಿ ಅಂಡ್ ಟೀಂ, ಈ ಚಿತ್ರವನ್ನ ನಿರ್ಮಾಣ ಮಾಡಿ ಗೆದ್ದಿದೆ. ರಿಷಬ್ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಭರತ್ ರಾಜ್, ಚಿತ್ರಕ್ಕೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗಾನವಿ ಲಕ್ಷ್ಮಣ್ ಹೀರೋ ರಿಷಬ್ ಶೆಟ್ಟಿಗೆ ಹೀರೋಯಿನ್ ಆಗಿ ಸಾಥ್ ಕೊಟ್ಟಿದ್ದಾರೆ. ಸಿಂಗಲ್ ಟ್ರೈಲರ್ನಿಂದ ಸಿನಿಮಾ ನೋಡ್ಲೇಬೇಕು ಅನ್ನೋ ಕುತೂಹಲ ಮೂಡಿಸಿದ್ದಾನೆ ಹೀರೋ.
ಹೀರೋ ಸಿನಿಮಾ ಒಂದು ದಿನದಲ್ಲಿ ನಡೆಯುವ ಕಥೆ. ಸಿನಿಮಾದಲ್ಲಿ ಆಕ್ಷನ್, ಸೆಂಟಿಮೆಂಟ್, ಲವ್, ಥ್ರಿಲ್, ಡಾರ್ಕ್ ಹ್ಯೂಮರಸ್ ಎಲ್ಲವೂ ಇದೆ. 43 ದಿನಗಳಲ್ಲಿ ಕೇವಲ 24 ಜನರ ತಂಡ, ಚಿಕ್ಕಮಗಳೂರಿನಲ್ಲಿ ಈ ಚಿತ್ರವನ್ನ ಕಟ್ಟಿಕೊಟ್ಟಿದೆ. ರಿಷಬ್ ಶೆಟ್ಟಿ, ಗಾನವಿ ಜೊತೆಗೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಕೆಲಸ ಮಾಡುವ ತಂತ್ರಜ್ಞರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಹೀರೋ ಚಿತ್ರಕ್ಕೆ ರಿಷಬ್ ಶೆಟ್ಟಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ‘ಹೀರೋ’ ಚಿತ್ರಕ್ಕಿದ್ದು ನಾಳೆ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹೀರೋ ದರ್ಬಾರ್ ಶುರುವಾಗಲಿದೆ. ಸಾಕಷ್ಟು ಟ್ವಿಸ್ಟ್ಗಳಿರೋ ಹೀರೋ ಸಿನಿಮಾ ಪ್ರೇಕ್ಷಕರ ಮನಗೆಲ್ಲೋದ್ರಲ್ಲಿ ಸಂದೇಹವಿಲ್ಲ. ಜಯಣ್ಣ ಫಿಲಂಸ್ ಬ್ಯಾನರ್ ಮೂಲಕ ಇಂದು ‘ಹೀರೋ’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ.