ಬೆಂಗಳೂರಿಗೆ ಬಿಸಿಲ ಧಗೆಯ ಬಿಸಿ, ಈ ವರ್ಷ ನಗರದ ತಾಪಮಾನ 36.6 ಡಿಗ್ರಿ ಸೆ.‌ಗೆ ತಲುಪುವ ಸಾಧ್ಯತೆ!

ಬೆಂಗಳೂರು: ರಾಜಧಾನಿ ಈಗ ‘ಬಿಸಿಲ ನಗರಿ’ ಆಗುತ್ತಿದೆ. ಕಾಂಕ್ರೀಟ್‌ ಕಾಡು. ಮರಗಳ ಮಾರಣ ಹೋಮದಿಂದ ಉದ್ಯಾನ ನಗರಿಯಲ್ಲಿ ಬಿಸಿಲಿನ ತಾಪ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಮಾರ್ಚ್ ಮೊದಲ ವಾರದಲ್ಲಿಯೇ ಸೂರ್ಯನ ತಾಪ ನೆತ್ತಿ ಸುಡುವಷ್ಟಿದೆ. ಮಾರ್ಚ್ 1ರಂದು ಬೆಂಗಳೂರಿನ

ತಾಪಮಾನ 33.6 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ಮುಂದಿನ ದಿನಗಳಲ್ಲಿ ತಾಪ ಇಧಿನ್ನಷ್ಟು ಏಧಿರಧಿಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಈ ವರ್ಷ ಬೆಂಗಳೂರಿನ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್‌ಗೆ ಮುಟ್ಟುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು. ಈಗಾಗಲೇ ಕಲಬುರ್ಗಿಯಲ್ಲಿತಾಪಮಾನ 37.5 ಡಿಗ್ರಿಗೆ ಮುಟ್ಟಿದೆ, ಕೊಪ್ಪಳದಲ್ಲಿ 36.5, ರಾಯಚೂರಿನಲ್ಲಿ37.4 ಹಾಗೂ ವಿಜಯಪುರದಲ್ಲಿ 35 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

2000ಕ್ಕಿಂತ ಮುನ್ನ ಬೆಂಗಳೂರು ನಧಿಗಧಿರಧಿದಲ್ಲಿಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿಇರುತ್ತಿತ್ತು. 2000 ದಿಂದ 2010ರ ಅವಧಿಯಲ್ಲಿ ಬೆಂಗಳೂರಿನ ಸರಾಸರಿ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತು. 2011ರಲ್ಲಿ ಮಾತ್ರ 35 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

”ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ತಾಪಮಾನ ಏರಿಕೆಯಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್‍ 1ರಂದೇ ಅತ್ಯಧಿಕ ತಾಪಮಾನ ವರದಿಯಾಗಿದೆ. ಮಾರ್ಚ್-ಮೇ ವರೆಗೂ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿತಾಪಮಾನ ಹೆಚ್ಚಾಗಿರಲಿದೆ ”ಎಂದು ಹವಾಮಾನ ಇಲಾಖೆಯ ಇಲಾಖೆ ನಿರ್ದೇಶಕ ಸಿ.ಎಸ್‌ ಪಾಟೀಲ್‌ ಹೇಳಿದ್ದಾರೆ.

ಮಾರ್ಚ್ನಲ್ಲಿ ದಾಖಲಾದ ಗರಿಷ್ಠ ತಾಪಮಾನ
ರಾಜಧಾನಿಯಲ್ಲಿಕಳೆದ ವರ್ಷ ಮಾರ್ಚ್ 1 ರಂದು 31ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ ಮಾರ್ಚ್ 31ರ ವೇಳೆಗೆ 34 ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. 2019ರ ಮಾ.30ರಂದು 36 ಡಿಗ್ರಿ ಸೆಲ್ಸಿಯಸ್‌, 2018ರ ಮಾ.24 ರಂದು 34.1, 2017ರ ಮಾ.26ರಂದು 37.2, 2016ರ ಮಾ.23ರಂದು 36.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. 1996ರ ಮಾ.29ರಂದು 37.3 ಡಿ.ಸೆ. ದಾಖಲಾಗಿರುವುದು ಮಾರ್ಚ್ನಲ್ಲಿದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನವಾಗಿದೆ.

ಅಗ್ನಿ ಅವಘಡ ಸಾಧ್ಯತೆ ಹೆಚ್ಚು
”ತಾಪಮಾನ ಹೆಚ್ಚಾದಂತೆ ನೀರಿನ ಕೊರತೆ, ಅಗ್ನಿ ಅವಘಡಗಳು, ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಬೇಸಿಗೆಯ ಬಿಸಿಲಿನಲ್ಲಿಅಗ್ನಿ ಅನಾಹುತಗಳು ಹೆಚ್ಚಾಗಿ ಕಂಡುಬರುತ್ತವೆ. ಉಷ್ಣಾಂಶ ಹೆಚ್ಚಾಗುತ್ತಿದ್ದಂತೆ ಕಸ ಹಾಕುವ ಸ್ಥಳಗಳು, ಸ್ಟೋರ್‌ರೂಂ ಮತ್ತು ಕೆಲವು ಕಚೇರಿಗಳು ಬೇಗನೆ ಅಗ್ನಿಗೆ ಸಿಲುಕುತ್ತವೆ. ಜನರೇಟರ್‌ಗಳು ಅಗ್ನಿ ಆಕಸ್ಮಿಕಕ್ಕೆ ಕಾರಣವಾಗುತ್ತವೆ. ಯವುದೇ ಉರಿಯುವ ವಸ್ತುವಿಗೆ ಬಿಸಿಲು ಹೆಚ್ಚು ತಾಗದೆ ಎಚ್ಚರಿಕೆ ವಹಿಸಿಸಬೇಕು ಎನ್ನುತ್ತಾರೆ” ಫೈರ್‌ ಎಂಜಿನಿಯರ್‌ ಮತ್ತು ಡೆಪ್ಯುಟಿ ಚೀಫ್‌ ಫೈಧಿರ್‌ ವಾರ್ಡನ್‌ ಬಾಲಕೃಷ್ಣ.


ಕಾಯಿಲೆಗಳು ಉಲ್ಬಣ:

”ಬೇಸಿಗೆ ದೇಹದ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ತೀವ್ರ ಬಿಸಿಲಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹಾಗೂ ಬಿಸಿಲಿನಿಂದ ಉಂಟಾಗುವ ಕಾಯಿಲೆಗಳ ಪ್ರಮಾಣ ಹೆಚ್ಚು. ಕರುಳುಬೇನೆ, ನಿರ್ಜಲೀಕರಣ, ವಾಂತಿ-ಭೇದಿ, ಕಣ್ಣಿನ ತೊಂದರೆ, ಮಕ್ಕಳನ್ನು ಬಾಧಿಸುವ ಚಿಕನ್‌ಪಾಕ್ಸ್‌, ಟೈಫಾಯ್ಡ್‌ ಜ್ವರ, ಬಿಸಿಲಿನಿಂದ ತಲೆ ಸುತ್ತು, ಮೈಗ್ರೇನ್‌, ಮೂಗಿನಲ್ಲಿರಕ್ತ ಸುರಿಯುವುದು ಕಾಣಿಸಿಕೊಳ್ಳುವ ಸಾಧ್ಯತೆ ಇದೆ” ಎನ್ನುತ್ತಾರೆ ದೀಧಿರ್ಘಾಧಿಯುಷ್‌ ಕ್ಲಿಧಿನಿಧಿಕ್‌ನ ಡಾ. ಮಂಜುನಾಥ್‌ ಡಿ. ನಾಯ್‌್ಕ.

ಇವೆಲ್ಲವೂ ಕಲುಷಿತ ನೀರಿನ ಸೇವನೆ, ವಾತಾವರಣದಲ್ಲಿ ಉಂಟಾಗುವ ಶುಷ್ಕತೆಯಿಂದ ಬ್ಯಾಕ್ಟೀರಿಯಾ ಹಾವಳಿ ಹೆಚ್ಚಾಗಿ ಕಾಯಿಲೆ ಹರಡಲು ಕಾರಣವಾಗುತ್ತದೆ. ಜತೆಗೆ ಕಣ್ಣು ಕೆಂಪಾಗುವುದು, ತುರಿಕೆ, ಕಣ್ಣಲ್ಲಿನೀರು, ಮದ್ರಾಸ್‌ ಐಯಂತಹ ಸಮಸ್ಯೆಗಳೂ ತೀವ್ರಗೊಳ್ಳುತ್ತಿವೆ ಎಂದು ಅವರು ಹೇಳಿದರು.

ಮಳೆ ಬರಲ್ಲ
ಮುಂದಿನ 10 ದಿನಗಳವರೆಗೆ ರಾಜಧಾನಿಯಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ, ಆದರೆ ತಾಪಮಾನ ಹೆಚ್ಚಾದಂತೆ, ಮುಂದಿನ ಕೆಲವು ದಿನಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *