ಕಲಬುರಗಿ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ಕಲಬುರಗಿ:ಮಾ.5: ರಸಪ್ರಶ್ನೆ ಸ್ಪರ್ಧೆ ಇಂದಿನ ದಿನಗಳಲ್ಲಿ ಒಂದು ಜನಪ್ರಿಯ ಮಾಧ್ಯಮ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಬುದ್ಧಿಯನ್ನು ಪ್ರಚೋದಿಸಿ ವಿಷಯದ ವಸ್ತುನಿಷ್ಠ ಗೃಹಿಕೆಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ|| ವಿನೋದ ಲಕ್ಕಪ್ಪನ್ ವಿಜ್ಞಾನಿ ಅಭಿಪ್ರಾಯ ಪಟ್ಟರು. ನಮ್ಮ ವಿದ್ಯಾರ್ಥಿಗಳು ಪ್ರಚಲಿತ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಉಂಟಾಗುವ ಬೆಳವಣಿಗೆಗಳ ಬಗ್ಗೆ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳ ಕುರಿತು ಓದುವ ಮತ್ತು ತಿಳಿದುಕೊಳ್ಳುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದು ವಿಜ್ಞಾನಿ ಡಾ|| ವಿನೋದ ಲಕ್ಕಪ್ಪನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಾ|| ಶ್ರೀಶೈಲ್ ಘೂಳಿ ಮಾತನಾಡಿ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿಯಲು ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಜೊತೆಗೆ ವೈಜ್ಞಾನಿಕ ಮನೋಭಾವನೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದರು.
ಕರಾವಿಪ ಅಧ್ಯಕ್ಷ ಗಿರೀಶ ಕಡ್ಲೇವಾಡರವರು ಸರ್ ಸಿ.ವ್ಹಿ.ರಾಮನ್‍ರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿದರು.
ಅಧ್ಯಕ್ಷತೆಯನ್ನು ಡಾ|| ಎ. ಆರ್. ಮಣೂರೆ ವಹಿಸಿದರು, ಸಂಯೋಜಕ ಶಿವರಾಜ ಪಾಟೀಲ ಸ್ವಾಗತಿಸಿದರು, ದೇವಿಂದ್ರ ಬಿರಾದಾರ ನಿರೂಪಿಸಿದರು, ಮಹೇಶ ದೇವಣಿ ವಂದಿಸಿದರು, ಮಹಮ್ಮದ ಇಸ್ರಾರ್ ಪಟೇಲ್ ಕ್ವಿಜ್ ಮಾಸ್ಟರ್ ಕಾರ್ಯ ನಿರ್ವಹಿಸಿದರು.
ಈ ಕಾರ್ಯಕ್ರಮವು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಲಬುರ್ಗಿ ನಗರದ ಎಸ್.ಜಿ.ಎನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಂಘಟಿಸಲಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *