ಕಲಬುರಗಿ : ಸಾಂಸರಿಕ ಜೀವನಕ್ಕೆ ಕಾಲಿಟ್ಟ ರಾಜ್ಯ ಮಹಿಳಾ ನಿಲಯದ ನಿವಾಸಿಗಳು
ಕಲಬುರಗಿ: ಇಲ್ಲಿನ ರಾಜ್ಯ ಮಹಿಳಾ ನಿಲಯದ 4 ಮಹಿಳಾ ನಿವಾಸಿಗಳ ವಿವಾಹವು ಕಳೆದ ಮಾರ್ಚ್ 2 ರಂದು ನಡೆದಿದ್ದು, ಈ ಮೂಲಕ ನಿವಾಸಿಗಳು ಸಾಂಸರಿಕ ಜೀವನಕ್ಕೆ ಕಾಲಿಟ್ಟಿದಾರೆ ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಜ್ಯೋತಿ ಎಂ. ಬಮ್ಮನಳ್ಳಿ ರವರು ತಿಳಿಸಿದ್ದಾರೆ.
ಮಹಿಳಾ ನಿಲಯ ನಿವಾಸಿಯಾಗಿರುವ ಗಾಯತ್ರಿ ಅವರು ಸೇಡಂ ತಾಲೂಕಿನ ಮದನಾ ಗ್ರಾಮದ ಪ್ರಶಾಂತ ಕುಮಾರ ಜೊತೆಗೆ, ಲಕ್ಷ್ಮೀ ಅವರು ಜೇವರ್ಗಿ ತಾಲೂಕಿನ ನೆಲೋಗಿಯ ಪವನಕುಮಾರ ಜೊತೆಗೆ, ಪ್ರಿಯಾಂಕ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿಯ ಶಾಂತಿನಾಥ ಜೊತೆ ಹಾಗೂ ಮಾಣಿಕೇಶ್ವರಿ ಅವರ ವಿವಾಹ ಯಾದಗಿರಿಯ ರಾಘವೇಂದ್ರ ಜೊತೆಗೆ ಸಂಪ್ರದಾಯಗಳ ಪ್ರಕಾರ ನೆರವೇರಿಸಿ ವಿವಾಹ ನೊಂದಣಿ ಕಛೇರಿಯಲ್ಲಿ ನೊಂದಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿವಾಹ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು ಮತ್ತು ವರಗಳ ಕುಟುಂಬ ವರ್ಗದವರು ಭಾಗಿಯಾಗಿದ್ದರು.