ಜಿಯೋ ಕಂಪನಿ ಹೊಸ ಲ್ಯಾಪ್ಟಾಪ್ ಮಾರುಕಟ್ಟೆಗೆ ಲಗ್ಗೆ..! ರಿಲಯನ್ಸ್ ಜಿಯೋ ಇದೀಗ ಜಿಯೋ ಬುಕ್ ..!
ಫೋನ್ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ರಿಲಯನ್ಸ್ ಜಿಯೋ ಇದೀಗ ಜಿಯೋ ಬುಕ್ ಪರಿಚಯಿಸುವ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಗ್ರಾಹಕರ ಮನಸೆಳೆಯಲಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇದೇ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಜಿಯೋ ಬುಕ್ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ತಿಳಿದುಬಂದಿದೆ.
ಜಿಯೋ ಹೊಸ ಲ್ಯಾಪ್ಟಾಪ್ವೊಂದನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಈ ಹಿಂದೆ ಮಾಹಿತಿ ಹೇಳಿಕೊಂಡಿತ್ತು. ನೂತನ ಲ್ಯಾಪ್ಟಾಪ್ ಬಿಡುಗಡೆ ಸಿದ್ಧವಾಗಿದ್ದು, ಮಾರುಕಟ್ಟೆ ಪ್ರವೇಶಿಸಲು ತಯಾರಾಗಿದೆ.
ರಿಲಯನ್ಸ್ ಜಿಯೋ 2018ರಲ್ಲಿ ಜಿಯೋ ಬುಕ್ ಹೆಸರಿನ ಲ್ಯಾಫ್ಟಾಪ್ ಸಿದ್ಧಪಡಿಸಲು ಯೋಜನೆ ಹಾಕಿಕೊಂಡಿತ್ತು. 2019ರ ವೇಳೆಗೆ ಈ ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿತ್ತು. ಇದೀಗ ‘Jio Book’ ಹೆಸರಿನಡಿ ಲ್ಯಾಪ್ಟಾಪ್ ಸಿದ್ಧಪಡಿಸುವ ಮೂಲಕ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲು ಮುಂದಾಗಿದೆ. ಅಂದಹಾಗೆಯೇ ಜಿಯೋ ಸಿದ್ಧಪಡಿಸಿದ್ದ ಜಿಯೋ ಬುಕ್ ಲ್ಯಾಪ್ಟಾಪ್ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಕಡಿಮೆ ಬೆಲೆಯ ಫೋನ್ ಪರಿಚಯಿಸಿರುವ ಜಿಯೋ ಇದೀಗ ಲ್ಯಾಪ್ಟಾಪ್ ಮೂಲಕ ಜನರ ಮನಗೆಲ್ಲಲು ಮುಂದಾಗಿದೆ
ಜಿಯೋ ಬುಕ್ 13.3 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಹೊಂದಿದ್ದು, 4G ಲ್ಯಾಪ್ಟಾಪ್ ಇದಾಗಿದೆ. 16:9 ಮಾದರಿಯಲ್ಲಿ 1920×1080 p ರೆಸಲ್ಯೂಷನ್ ಹೊಂದಿದೆ. ವೇಗದ ಕಾರ್ಯಚರಣೆಗಾಗಿ 4GB RAM ಮತ್ತು 64GB ಇಂಟರ್ನಲ್ ಮೊಮೊರಿಯನ್ನು ನೀಡಿದೆ.
ಇಂಟೆಲ್ ಪೆನ್ಟಿಮ್ ಕ್ವಾಡ್ಕೋರ್ ಪ್ರೊಸಸರ್ ಅಳವಡಿಸಿರುವ ಈ ಜಿಯೋ ಬುಕ್ನಲ್ಲಿ HD ಕ್ಯಾಮೆರಾವನ್ನು ಅಳವಡಿಸಲಾಗಿದೆ. ವಿಡಿಯೋ ಕಾಲಿಂಗ್ ಸೇವೆಗಾಗಿ ಈ ಸೌಲಭವ್ಯವನ್ನು ಸಹ ನೀಡಿದೆ. ಅಷ್ಟು ಮಾತ್ರವಲ್ಲದೆ, ಸ್ಮಾರ್ಟ್ಫೋನ್ ನಂತೆ ಸಿಮ್ ಕಾರ್ಡ್ ಸಪೊರ್ಟ್ ಹೊಂದಿದ್ದು, ಇದರ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿಕೊಂಡು ಬಳಸಬಹುದಾಗಿದೆ.
ತನ್ನದೇ ಆದ ಆಪರೇಟಿಂಗ್ ಸಿಸ್ಟಂ ಜಿಯೋ ಬುಕ್ ಹೊಂದಿದ್ದು, ಅದನ್ನು ಜಿಯೋ ಓಎಸ್ ಎಂದು ಕರೆಯಲಾಗಿದೆ. ನೂತನ ಲ್ಯಾಪ್ ಟ್ಯಾಪ್ ಸಿದ್ಧಪಡಿಸಲು ರಿಲಯನ್ಸ್ ಚೀನಾ ಮೂಲದ ಕಂಪನಿಯಾದ ಬ್ಲೂಬ್ಯಾಂಕ್ ಸಹಭಾಗಿತ್ವವನ್ನು ಪೆಡೆದುಕೊಂಡಿದೆ. ನೂತನ ಲ್ಯಾಪ್ಟಾಪ್ನಲ್ಲಿ ಹೆಚ್ಡಿಎಮ್ಐ ಕನೆಕ್ಟರ್, ಡುಯೆಲ್ ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್. ಜೊತೆಗೆ 3 ಅಕ್ಸೆಲೆರೊಮೀಟರ್ ಮತ್ತು ಕ್ಯಾಲ್ಕಾಮ್ ಆಡಿಯೋ ಚಿಪ್ ನೀಡಲಾಗಿದೆ. ಒಟ್ಟಿನಲ್ಲಿ ಗ್ರಾಹಕರು ಈ ಲ್ಯಾಪ್ ಟ್ಯಾಪ್ ಪಡೆಯಲು ಕೆಲವು ದಿನಗಳು ಕಾಯಬೇಕಿದೆ.