ರಾಜವೀರ ಮದಕರಿನಾಯಕ ಚಿತ್ರಕ್ಕೂ ಮುನ್ನ ರಾಕ್ಲೈನ್ ಜೊತೆ ದರ್ಶನ್ ಮತ್ತೊಂದು ಸಿನಿಮಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಜವೀರ ಮದಕರಿನಾಯಕ ಚಿತ್ರದ ಶೂಟಿಂಗ್ ಇನ್ನೂ ಯಾಕೆ ಶುರುವಾಗಿಲ್ಲ ಅಂತ ಕೇಳ್ತಿದ ಅಭಿಮಾನಿಗಳಿಗೆ ಈಗಾಗಲೇ ಒಂದು ಮಟ್ಟದ ಉತ್ತರ ಸಿಕ್ಕಿದೆ. ರಾಜವೀರ ಮದಕರಿನಾಯಕ ಸಿನಿಮಾಕ್ಕೂ ಮೊದಲು ಒಂದು ಕಮರ್ಶಿಯಲ್ ಸಿನಿಮಾ ಮಾಡ್ಬೇಕು ಅನ್ನೋದು ದರ್ಶನ್ ಅವರಿಂದ ಸಿಕ್ಕಿರೋ ಮಾಹಿತಿ. ಈಗ ಆ ಕಮರ್ಶಿಯಲ್ ಸಿನಿಮಾ ಮಾಡೋದು ಯಾರು ಅನ್ನೋದಕ್ಕೆ ಉತ್ತರ ಇಲ್ಲಿದೆ.
ಎಲ್ಲವು ಸರಿಯಾಗಿ ಇದ್ದಿದ್ರೆ ಇಷ್ಟೊತ್ತಿಗಾಗಲೇ ದರ್ಶನ್ ‘ರಾಜವೀರ ಮದಕರಿನಾಯಕ’ ಸಿನಿಮಾದ ಸೆಟ್ನಲ್ಲಿ ಸೆಟಲ್ ಆಗಿ ಇರ್ತಿದ್ರು. ಆದರೆ ರಾಬರ್ಟ್ ಸಿನಿಮಾವನ್ನ ಯಶಸ್ವಿಯಾಗಿ ತೆರೆಗೆ ಅರ್ಪಿಸಿ ಆಮೇಲೆ ಶೂಟಿಂಗ್ ಸೆಟ್ ಕಡೆ ಮುಖ ಮಾಡೋಣ ಅನ್ನೋದು ದರ್ಶನ್ ಅವರ ಪ್ಲಾನ್ ಅಂತೆ.
ರಾಬರ್ಟ್ ಸಿನಿಮಾ ತೆರೆಕಂಡ ಕೆಲವೇ ದಿನಗಳಲ್ಲಿ ದರ್ಶನ್ ಅವರ ಮುಂದಿನ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರಬಿಳಲಿದೆ. ಈಗಾಗಲೇ ಯಜಮಾನ ಸಿನಿಮಾ ನಿರ್ಮಾಪಕರು, ರಾಬರ್ಟ್ ನಿರ್ಮಾಪಕರು ದರ್ಶನ್ಗಾಗಿ ಸಿನಿಮಾ ಮಾಡಲು ತುದಿಗಾಲಿನಲ್ಲಿದ್ದಾರೆ. ಆದ್ರೆ ದರ್ಶನ್ ಅವರ ಕಮರ್ಶಿಯಲ್ ಕಾಲ್ ಶೀಟ್ ರಾಕ್ಲೈನ್ ವೆಂಕಟೇಶ್ ಅವರ ಪಾಲಾಗಿದೆ. ಮದಕರಿನಾಯಕ ಸಿನಿಮಾಕ್ಕೂ ಮೊದ್ಲೇ ಒಂದು ಲವ್ ಕಮ್ ಆ್ಯಕ್ಷನ್ ಎಂಟರ್ಟೈನರ್ ಸಿನಿಮಾ ಮಾಡಲು ರಾಕ್ ಲೈನ್ ಮತ್ತು ದರ್ಶನ್ ಒಂದಾಗಲಿದ್ದಾರೆ.
ರಾಕ್ಲೈನ್ ವೆಂಕಟೇಶ್ ಹಾಗೂ ದರ್ಶನ್ ಕಾಂಬೀನೇಷನ್ ಸಿನಿಮಾಕ್ಕೆ ಯಾರು ನಿರ್ದೇಶಕರು ಅನ್ನೋದು ಕೆಲವೇ ದಿನಗಳಲ್ಲಿ ಬಹಿರಂಗವಾಗಲಿದೆ. ಏಪ್ರಿಲ್ನಲ್ಲಿ ಈ ಹೊಸ ಸಿನಿಮಾ ಸೆಟ್ಟೇರೋ ಸಾಧ್ಯತೆ ಹೆಚ್ಚಿದೆ.