ಕಲಬುರಗಿ ನಗರದ ಎಂ.ಎನ್.ಜಿ.ಅಂದಾನಿ ಆರ್ಟ ಗ್ಯಾಲರಿಯಲ್ಲಿ ವರ್ನಿಕಾ ಸಮಕಾಲೀನ ಮಹಿಳಾ ಕಲಾವಿದರ ಸಮೂಹ ಚಿತ್ರಕಲಾ ಪ್ರರ್ದಶನ
ಕಲಬುರಗಿ ನಗರದ ಎಂ.ಎನ್.ಜಿ.ಅಂದಾನಿ ಆರ್ಟ ಗ್ಯಾಲರಿಯಲ್ಲಿ ಮಾ 8 ರಂದು ಸೋಮವಾರ ಬೆಳ್ಳಗೆ 11:30 ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ
ವರ್ನಿಕಾ ಸಮಕಾಲೀನ ಮಹಿಳಾ ಕಲಾವಿದರ ಸಮೂಹ ಚಿತ್ರಕಲಾ ಪ್ರರ್ದಶನ ಆಯೋಜಿಸಲಾಗಿದೆ. ಚಿತ್ರ ಕಲಾ ಸಂಶೋದಕಿ ಶಿಲ್ಪಾ ಮುಡಬಿ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಮ್ಸ್ ಅಸೋಸಿಯೆಟ್ ಪ್ರೋಪಸರ್ ಡಾ ರೂಪಾ ಪಾಟೀಲ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ ಹಣಮಂತ ಮಂತಟ್ಟಿ ಅತಿಥಿಗಳಾಗಿದ್ದು ಪ್ರಗತಿಪರ ಚಿಂತಕಿ ಕೆ. ನೀಲಾ ಅಧ್ಯಕ್ಷ ತೆವಹಿಸಲಿದ್ದಾರೆ. ಖ್ಯಾತ ಕಲಾವಿದೆ ಅನೂಷಾ ಜಿ.ಕಾಂತಾ ಮತ್ತು ಅಶ್ವಿನಿ ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಗುವುದು.
ಗಂಗಮ್ಮಾ ಬಿ.ವಾಲಿಕರ,ಕವಿತಾ ಎಸ್.ಕಟ್ಟೆ,ಕಾವೇರಿ ಎಚ್.ಪೂಜಾರ,
ಮಹಾಂತೇಶ್ವರಿ ಎ.ಕಂಠಿ,
ನಯನ ಬಾಬುರಾವ ಅವರ ಚಿತ್ರ ಕಲಾ ಪ್ರದರ್ಶನ ಮಾರ್ಚ್ 8 ರಿಂದ ಮಾರ್ಚ್ 10 ರವರೆಗೆ, 2021 ಸಮಯ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿಕ್ಷೀಸಬಹುದು.