ಶಹಾಪುರ: ಸತತ ಪ್ರಯತ್ನದಿಂದ ಗುರಿ ಸಾಧಿಸಲು ಸಾಧ್ಯ:ಮಾಲಗತ್ತಿ
ಶಹಾಪುರ:ಮಾ.7:ಸತತ ಪ್ರಯತ್ನದಿಂದ ಅಧ್ಯಾಯನ ಮಾಡಿದರೆ ಗುರಿ ಸಾಧಿಸಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಾದರು ಯಶಸ್ವಿಯಾಗಬಹುದು ನಂಬಿಕೆ, ಶ್ರದ್ದೆಯಿಂದ ಪ್ರಯತ್ನಿಸಿದರೆ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ ವಿಧ್ಯಾರ್ಥಿಗಳು ಅರಿತುಕೊಂಡು ಸಾಧಿಸಲು ಪ್ರಾರಂಭಿಸಬೇಕು ಎಂದು ಭೀಮರಾಯನಗುಡಿ ಮುಖ್ಯ ಲೆಕ್ಕಾಧಿಕಾರಿಗಳಾದ ಮಹೇಶ ಮಾಲಗತ್ತಿ ತಿಳಿಸಿದರು.
ನಗರದ ಬಾಪುಗೌಡ ದರ್ಶನಾಪುರ ಸಾರಕ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ಎನ್.ಎಸ್.ಎಸ್. ಶಿಬಿರದ ಎ ಮತ್ತು ಬಿ ಘಟಕ ಹಾಗೂ ಸಂಸ್ಕøತಿಕ ಘಟಕದಿಂದ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಉಚಿತ ಕಾರ್ಯಾಗಾರ ಉಧ್ಘಾಟಿಸಿ ಅವರು ಮಾತನಾಡಿದರು.
ನಂತರ ಹುಬ್ಬಳ್ಳಿಯ ಜಂಟಿ ಪ್ರಾದೇಶಿಕ ಆಯುಕ್ತರ ಕಚೇರಿ ಭವಿಷ್ಯ ನಿದಿ ಕರ್ನಾಟಕ ಮತ್ತು ಗೋವಾ ಮುಖ್ಯಸ್ಥರಾದ ಬಾಲಕೃಷ್ಣನಾಯಕರವರು ಮಾತನಾಡಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾ ವಿಷಯಗಳನ್ನು ಪರಿಪೂರ್ಣವಾಗಿ ಅರ್ಥಹಿಸಕೊಳ್ಳಬೇಕು. ದಿನಪತ್ರಿಕೆಗಳ ಓದುವದನ್ನು ಮರೆಯಬಾರದು ಎಂದ ಅವರು ಶಿಸ್ತು ಬದ್ದ ಆಧ್ಯಾಯನಗಳಿಂದ ಸ್ಪರ್ಧಾ ವಿಜಯ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಜಂಟಿ ವಿಬಾಗದ ನಿಯಂತ್ರಕರಾದ ಡಾ. ಸುಬೇಶ ಎಸ್, ಭವಿಷ್ಯ ನಿಧಿ ಸಾಹಾಯಕ ಆಯುಕ್ತರಾದ ಟಿ.ಆರ್. ವೀರೇಶ, ನೀಲಂ ಸಂಜವೀರಡ್ಡಿ ಯವರು ಪರೀಕ್ಷೆ ತಯ್ಯಾರಿ ಕುರಿತು ಪ್ರಶ್ನೆ ಪತ್ರಿಕೆಗಳ ಸ್ವರೂಪ, ವಿಷಯಗಳ ಆಯ್ಕೆ ಪದ್ದತಿಯನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಶಿವಲಿಂಗಣ್ಣ ಸಾಹು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಅಧಿಕಾರಿಗಳಾದ ಗಂಗಪ್ಪ ಹೊಸಮನಿ, ರಾಘವೆಂದ್ರ ಹಾರಣಗೇರಾ. ಸಂಸ್ಕøತಿಕ ಸಂಚಾಲಕರಾದ ಭೀಮಪ್ಪ ಬಂಡಾರಿ, ಮಾನಯ್ಯ ಗೌಡಗೇರಾ, ಉಪನ್ಯಾಷಕರಾದ ಸೈಯದ್ ಚಾಂದಪಾಷಾ, ಸಂಗಣ್ಣ ದಿಗ್ಗಿ, ಸತೀಶ ತುಳೇರ, ದೇವಿಂದ್ರ ಆಲ್ದಾಳಸೇರಿದಂತೆ ಇತರರು ಹಾಜರಿದ್ದರು.