ಜೇವರ್ಗಿ : ಟಿಪ್ಪರ್ ಡಿಕ್ಕಿ: ವ್ಯಕ್ತಿ ಸಾವು
ಜೇವರ್ಗಿ,ಮಾ.೭-ಟಿಪ್ಪರ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಪಟ್ಟಣದ ರೇಷ್ಮೆ ಇಲಾಖೆ ಎದುರುಗಡೆಯ ಗಡ್ಡಿಫೂಲ್ ಹತ್ತಿರ ತಡರಾತ್ರಿ ಸಂಭವಿಸಿದೆ.
ಮಶಾಕ್ ದಸ್ತಗಿರಿ ಮೃತಪಟ್ಟವರು. ರೇಷ್ಮೆ ಇಲಾಖೆ ಎದುರುಗಡೆಯ ಗಡ್ಡಿ ಫೂಲ್ ಹತ್ತಿರ ರಸ್ತೆ ದಾಟುತ್ತಿದ್ದಾಗ ಶಹಾಪುರ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ದೇಹ ಟಿಪ್ಪರ್ ಚಕ್ರಕ್ಕೆ ಸಿಲುಕಿದ್ದು, ಸುಮಾರು ಒಂದು ಕಿಲೋ ಮೀಟರ್ ವರೆಗೆ ಎಳೆದುಕೊಂಡು ಹೋಗಿದೆ.ಇದರಿಂದಾಗಿ ಯುವಕನ ರುಂಡ-ಮುಂಡ ಬೇರ್ಪಟ್ಟಿದೆ.
@೧೨bಛಿ = ರಸ್ತೆತಡೆ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಬಸವೇಶ್ವರ ಚೌಕ್ ನಲ್ಲಿ ವಿವಿಧ ಸಂಘಟನೆಗಳಿಂದ ರಸ್ತೆತಡೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಲಾಯಿತು. ಟಿಪ್ಪರ್ ಗಳನ್ನು ಪಟ್ಟಣದ ಒಳಗಡೆ ಬಿಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿವಿಧ ಸಂಘಟನೆಯ ಮುಖಂಡರಾದ ಮೈನುದ್ದಿನ್ ಇನಮ್ದಾರ, ಮೈಬೂಬ್ ಇನಮ್ದಾರ್ ಅಲ್ಲಾಭಕ್ಷ ಭಾಗವನ್, ಬಾಬಾ ಹನೀಫ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸ್ಥಳಕ್ಕೆ ಪಿಎ??? ಸಂಗಮೇಶ ಅಂಗಡಿ ಅವರು ಭೇಟಿ ನೀಡಿ ದುರಂತಕ್ಕೆ ಕಾರಣರಾದ ಟಿಪ್ಪರ್ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರಾರಿಯಾದ ಟಿಪ್ಪರ್ ಚಾಲಕನನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ತಿಳಿಸಿದರು.
ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಅನಧಿಕೃತ ಮರಳು ಟಿಪ್ಪರ್ ಸಂಚಾರ ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಅದ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ ಮೃತ ಯುವಕನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಇಲ್ಲಿಯವರೆಗೆ ಅಪಘಾತದಲ್ಲಿ ಹಲವಾರು ಜನ ಸಾವನ್ನಪ್ಪಿದ್ದಾರೆ. ಇನ್ನೆಷ್ಟು ಸಾವುಗಳು ಸಂಭವಿಸಬೇಕು? ಕೂಡಲೇ ಅನಧಿಕೃತ ಮರಳು ಟಿಪ್ಪರ್ ಸಂಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.