ಬೀದರ : ರಸಪ್ರಶ್ನೆ ಕಾರ್ಯಕ್ರಮದಿಂದ ಅಲೊಚನಾ ಶಕ್ತಿ ಹೆಚ್ಚಳ

ಬೀದರ:ಮಾ.7: ಕರ್ನಾಟಕ ಸರ್ಕಾರ, ಸಮಗ್ರ ಶಿಕ್ಷಣ ಕರ್ನಾಟಕ, ಯೋಜನೆಯಡಿ ಅಗಸ್ತ್ಯ ಫೌಂಡೇಷನ್ ಕೋರ ವಿಜ್ಞಾನ ಚಟುವಟಿಕಾ ಕೇಂದ್ರ, ಬೀದರ ಹಲವು ವರ್ಷಗಳಿಂದ ಮಕ್ಕಳು ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಕ್ರೀಯಾಶೀಲತೆ, ಪ್ರಶ್ನಾರ್ಥಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇತ್ತಿಚೀಗೆ ಅಗಸ್ತ್ಯ ಫೌಂಡೇಷನ್ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರ ಬೀದರ ವತಿಯಿಂದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಮಾತನಾಡಿ, ಮಕ್ಕಳು ಇದರಿಂದ ಬಹಳಷ್ಟು ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ರಸ ಪ್ರಶ್ನೆ ಕಾರ್ಯಕ್ರಮದಿಂದ ಮಕ್ಕಳಲ್ಲಿ ಆಲೋಚನಾ ಶಕ್ತಿ, ಕ್ರಿಯಾಶೀಲತೆ, ಬುದ್ಧಿಶಕ್ತಿ, ಹೆಚ್ಚುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಅಗಸ್ತ್ಯ ವಿಜ್ಞಾನ ಕೆಂದ್ರ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ 10ನೇ ತರಗತಿ ಮಕ್ಕಳು ಇದರ ಸದುಪಯೋಗ ಪಡೆಯಲು ಸಹಾಯಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ, ಪ್ರೌಢ ಶಾಲೆಯ ಮಕ್ಕಳಿಗೆ ಇದು ತುಂಬಾ ಲಾಭದಾಯಕವಾಗಿದೆ. ಮಕ್ಕಳು ಇದರಿಂದ ಹೆಚ್ಚಿನ ಆಸಕ್ತಿ ವಿದ್ಯಾಭ್ಯಾಸದ ಕಡೆಗೆ ಗಮನಹಿಸಿ ಪರೀಕ್ಷೆಯಲ್ಲಿ ಹೆಚ್ಚನ ಅಂಕಗಳನ್ನು ಗಳಿಸಲು ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳನ್ನು ಈ ರಸ ಪ್ರಶ್ನೆ ಕಾರ್ಯಕ್ರಮದ ಮೂಲಕ ಕಲಿಯಬಹುದು ಎಂದರು.

ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನ ಯುಗದ ಆಧುನಿಕತೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಆದರ್ಶ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಓದಿ ಮುಂದೆ ಬರಬೇಕೆಂದು ಹೇಳಿದರು. ಕಾಲಕ್ಕೆ ತಕ್ಕಂತೆ ಹೊಸ ಹೊಸ ಸಂಶೋಧನೆಯನ್ನು ತಾವು ಮಾಡಬೇಕೆಂದು ಸಲಹೆ ನೀಡಿದರು.

ಬಿ.ವಿ.ಬಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ||. ವಿಠ್ಠಲರೆಡ್ಡಿ ಮಾತನಾಡಿ, ವಿಜ್ಞಾನಿಗಳ ಕಥೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಲು ಸಲಹೆ ನೀಡಿದ ಅವರು, ಹುಟ್ಟುತ್ತಲೇ ಮಕ್ಕಳು ಯಾರು ಜಾಣರಿರುವುದಿಲ್ಲ ಕಾಲಕ್ರಮೇಣ ಮಾಡುವ ಸತತ ಪ್ರಯತ್ನದಿಂದ ಮುಂದೆ ಬರಲು ಅನೇಕ ವಿಜ್ಞಾನಿಗಳ ಸರ್.ಸಿ.ವಿ.ರಾಮನ್, ಐನ್‍ಸ್ಟೀನ್ ಮತ್ತು ಥಾಮಸ್ ಅಲ್ವಾ ಎಡಿಸನ್ ಅವರ ಉದಾಹರಣೆ ಕೊಟ್ಟು ಪ್ರೇರೆಪಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಟಿ.ಆರ್ ದೊಡ್ಡಿ ಮಾತನಾಡಿದರು. ಸಮಗ್ರ ಶಿಕ್ಷಣ ಕರ್ನಾಟಕದ ಸಹಾಯಕ ಉಪ ಸಮನ್ವಯಾಧಿಕಾರಿ ಹುಡುಗೆ ಗುಂಡಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಾಂಡುರಂಗ ಬೆಲ್ದಾರ್, ಪ್ರಭು ಗಂಗೂರ್, ಸಿದ್ದಾರೆಡ್ಡಿ ನಾಗೂರೆ ಕಾರ್ಯಕ್ರಮದಲ್ಲಿದ್ದರು.

ಅನೀಲ ಶಿರಮುಂಡಿ ಕಾರ್ಯಕ್ರಮ ನಿರೂಪಿಸಿ, ಬಾಬುರಾವ್ ವಂದಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *