ಸಿರುಗುಪ್ಪ : ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಒತ್ತಾಯಿಸಿ ಮನವಿ
ಸಿರುಗುಪ್ಪ ಮಾ 07 : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಶಾಸಕರ ನಿವಾಸದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ತಾಲೂಕು ಘಟಕದವತಿಯಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಒತ್ತಾಯಿಸಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರಿಗೆ ತಾಲೂಕು ಅಧ್ಯಕ್ಷೆ ಎಂ.ಟಿ.ಶಾಂತ ಅವರು ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ನಮ್ಮ ತಾಲೂಕಿನ ಮಹಿಳಾ ಶಿಕ್ಷಕಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಹಿಳಾ ಶಿಕ್ಷಕಿಯರು ಎದುರಿಸುವ ಸಮಸ್ಯೆಗಳನ್ನು ಸಂಘಟನೆಯ ಮೂಲಕ ಪರಿಹಾರಿಸಿಕೊಳ್ಳುವ ಉದ್ದೇಶದಿಂದ ಮಹಿಳಾ ಶಿಕ್ಷಕಿರನ್ನು ಒಳಗೊಂಡು ನೂತನವಾಗಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ತಾಲೂಕು ಘಟಕವನವನ್ನು ರಚಿಸಿದ್ದು. ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮೂಲಭೂತ ಸೌಕಾರ್ಯಗಳನ್ನು ನೀಡಿ, ಡಿಜಿಟಲ್, ಸ್ಮಾರ್ಟ್ ತರಗತಿಗಳನ್ನು ಪ್ರಾರಂಭಿಸಿ ನಮ್ಮ ತಾಲೂಕನ್ನು ಭತ್ತದ ಸಿರಿಯಂತೆ ವಿದ್ಯಾಯ ಸಿರಿಯನ್ನಾಗಿಸಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ತಾಲೂಕು ಘಟಕದವತಿಯಿಂದ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರಿಗೆ ಸನ್ಮಾನಿಸಿ ಸಾವಿತ್ರಿಬಾಯಿ ಪುಲೆ ಭಾವಚಿತ್ರವನ್ನು ನೆನಪಿನ ಕಾಣಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ವಿ.ನಾಗರತ್ನಮ್ಮ, ಉಪಾಧ್ಯಕ್ಷೆ ಪದ್ಮವತಿ, ಕೋಶಾಧ್ಯಕ್ಷೆ ಎಸ್.ಛಾಯಾದೇವಿ, ಸದಸ್ಯರಾದ ಎ.ರೇಣುಕಾ, ರೇಖಾ, ಸಂಧ್ಯರಾಣಿ, ಶಾಹಿನಾ, ಶರಣಮ್ಮ, ಲಲಿತ ಇದ್ದರು.