ಬೀದರ : ಅಂಕ ಗಳಿಕೆಗಿಂತ ಜ್ಞಾನಾರ್ಜನೆ ಮುಖ್ಯ: ದಯಾನಂದ ಅಗಸರ
ಬೀದರ:ಮಾ.7: ಬೀದರ ನಗರದ ಗುರುನಾನಕ ಸಂಸ್ಥೇಯ ನೂತಕ ಸ್ನಾತಕೋತ್ತರ ಪದವಿ ಕಟ್ಟಡ ಉಧ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ದಯಾನಂದ ಅಗಸರ ಅವರು ಮಾತನಾಡುತ್ತ ವಿದ್ಯಾರ್ಥಿಗಳು ಯೋಚಿಸಿ ಸರಿಯಾದ ದಿಕ್ಕಿನಲ್ಲಿ ಹೆಚ್ಚೆ ಇಡಬೇಕು, ವಿದ್ಯಾರ್ಥಿಗಳು ಅಂಕಗಳಿಕೆಗಿಂತ ಜ್ಞಾನಾರ್ಜನೆ ಮುಖ್ಯ ಎಂದು ಹೇಳಿದರು. ಗುರುನಾನಕ ಸಂಸ್ಥೆಯು ಈ ಭಾಗದ ಪ್ರತಿಷ್ಟಿತ ಸಂಸ್ಥೆ ಯಾಗಿದ್ದು ಒಳ್ಳೆಯ ಮೂಲಸೌಕರ್ಯ, ಉತ್ತಮ ನಿರ್ವಹಣೆ, ಕೌಶ್ಯಲಯುತ ಬೋಧಕ ಸಿಬ್ಬಂದಿ ಹೊಂದಿದಾರೆ ಎಂದು ಹೇಳಿದರು ಹಾಗೂ ಈ ಎಲ್ಲಾ ಸೌಕರ್ಯಕ್ಕೆ ಕಾರಣಿಕರ್ತರಾದ ಶ್ರೀಮತಿ ರೇಷ್ಮಾಕೌರಜಿ ಅವರು ಗೌರವ ಡಾಕ್ಟರೆಟ್ ಗೆ ಅರ್ಹರು ಎಂದು ಹೇಳಿದರು ಮತ್ತು ನವಭಾರತಕ್ಕೆ ಶ್ಯೆಕ್ಷಣಿಕ ಕ್ರಾಂತಿಯಾದ ಹೂಸ ಶಿಕ್ಷಣ ನೀತಿ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಕೇವಲ ವ್ಯಾಪಾರಕ್ಕಾಗಿ ಕಾಲೇಜುಗಳು, ಫ್ಯಾಕ್ಟ್ರಿಯಂತೆ ನಡೆಸುವುದು ಒಳ್ಳೆಯದಲ್ಲ ಎಂದರು. ಗುರು ನಾನಕ ಸಂಸ್ಥೆ ಒಳ್ಳೆಯ ರೀತಿಯಲ್ಲಿ ಡಾ|| ಎಸ್. ಬಲಬೀರಸಿಂಗ್ ನಡೆಸುತ್ತಿದ್ದಾರೆ ನನಗೆ ಬಹಳ ಹೆಮ್ಮೆ ಎನಿಸುತ್ತಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ ಅವರು ಮಾತನಾಡಿ ಪದವಿ ಪೂರ್ವ ಕಾಲೇಜಿನಿಂದ ಪದವಿ ಕಾಲೇನವರೆಗೆ ಸುಮಾರು 3000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದು ಅವರಿಗೆ ಒಳ್ಳೆಯ ಕೌಶ್ಯಲಯುತ ಶಿಕ್ಷಣ ನೀಡುತ್ತಿದ್ದು, ಉತ್ತಮ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದಲೆ ಉದ್ಯೋಗನಿಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇಲ್ಲಿಯ ಶಿಕ್ಷಕರು ಮಕ್ಕಳಿಗೆ ಕಲಿಸಿಕೊಟ್ಟ ಪ್ರಾಮಾಣಿಕತೆ, ಓದಿನ ಗುಟ್ಟು ಮತ್ತು ಅಧ್ಯಯನಶೀಲತೆಗಳು ಮಕ್ಕಳಿಗೆ ಯಾವಾಗಲು ಎತ್ತರಕ್ಕೆ ಕೊಂಡೊಯ್ಯುವಂತವುಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ|| ಶಾಮಲಾ ವಿ.ದತ್ತಾ, ಪ್ರೊ.ಎಸ್.ಎನ್.ಬಿರಾದಾರ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.