ಬಳ್ಳಾರಿ : ಹೆಚ್ ಡಿ ಕೆ ಕುರಿತು ಮುಲಾಲಿ ಅವಹೇಳನ ಹೇಳಿಕೆ ಜೆಡಿಎಸ್ ಖಂಡನೆ

ಬಳ್ಳಾರಿ ಮಾ 07 : ನಗರದ ಸಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನ ವಾಗಿ ನಿನ್ನೆ ಕಲ್ಬುರ್ಗಿಯಲ್ಲಿ ಮಾತನಾಡಿದ್ದು ಅದನ್ನು ಖಂಡಿಸುವುದಾಗಿ ಜೆಡಿಎಸ್ ನಗರ ಅಧ್ಯಕ್ಷ ವಿಜಯಕುಮಾರ್ ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ರಾಜ್ಯದಲ್ಲಿ 7ಜನ ಮಾಜಿ ಮುಖ್ಯಮಂತ್ರಿಗಳಿದ್ದಾರೆ ಆದರೆ, ಕುಮಾರಸ್ವಾಮಿ ಅವರ ಬಗ್ಗೆ ಯಾಕೇ ಇವರು ಮಾತನಾಡಿದ್ದಾರೆ ಎಂಬುದು ತಿಳಿಯದಾಗಿದೆ.
ಅವರೊಬ್ಬ ಮಹಾನ್ ದುರಂತ ಮುಖ್ಯಮಂತ್ರಿ, ಕುಂಬಳಕಾಯಿ ಕಳ್ಳ ಅಂದರೆ, ಹೇಗಲುಮುಟ್ಟಿಕೊಂಡು ನೋಡಿಕೊಳ್ಳುತ್ತಾರೆ. ಇವರೊಬ್ಬ ಮಾಜಿ ಮುಖ್ಯಮಂತ್ರಿಗಳಾಗಿದ್ದು, ಕಾನೂನು ಇವರ ಮನೆಯಲ್ಲಿ ಇದೆನಾ ‌ಮುಂತಾಗಿ ಅವಹೇಳನಕಾರಿಯಾಗಿ, ಅವಾಚ್ಛ ಶಬ್ಧಗಳಿಂದ ಹಗುರವಾಗಿ ಕುಮಾರಣ್ಣಸ್ವಾಮಿ ಅವರ ಬಗ್ಗೆ ಮಾತನಾಡಿರುವುದನ್ನು ಬಳ್ಳಾರಿ ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷವು ತಿವ್ರವಾಗಿ ಖಂಡಿಸಲಿದೆ.
ಇನ್ನೂ ಹಲವಾರು 19 ಜನ ಪ್ರಭಾವಿಗಳ ಸಿಡಿಗಳು ನನ್ನ ಬಳಿ ಇವೆ ಎಂದು ಹೇಳುವ ಯಾವುದೇ ವ್ಯಕ್ತಿ ಇರಲಿ ಅಂತವರ ಸರ್ಕಾರ ಕೂಡಲೇ ಪರಿಶೀಲನೆ ನಡೆಸಿ ಅಂತವರ ವಿರುದ್ಧ ಕಠಿಣ ಕ್ರಮಕೈಗೊಂಡು ಜೈಲಿಗೆ ಕಳಿಸಬೇಕು. ಈ ರೀತಿ ಖಾಸಗಿ ವಿಚಾರಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವರನ್ನು ಏರೂಪ್ಲೇನ್ ಹತ್ತಿಸಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಮುಲಾಲಿಯವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ.
ಸಮಾಜಿಕ ಹೋರಾಟಗಾರು ಆರ್.ಟಿ.ಐ ಕಾರ್ಯಕರ್ತ ಎಂದು ರಾಜ್ಯಾದ್ಯಂತ ಎಷ್ಟು ಪುಣ್ಯದ ಕೇಲಸಗಳನ್ನು ನೀವು ಮಾಡಿದ್ದೀರಿ ಎನ್ನುವುದು ಸ್ಪಷ್ಟವಾಗಿ ರಾಜ್ಯದ ಜನರಿಗೆ ಮಾಹಿತಿ ಇದೆ. ಕೆಲ ದಿನಗಳ ಹಿಂದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಗಲಾಟೆ ಪ್ರಕಾರಣದಲ್ಲಿ ನಿಮ್ಮ ವಿರುದ್ಧ ನಗರದ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ 307ರ ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ವಿಚಾರಣೆ ಎದುರಿಸುತ್ತಿದ್ದಿರಿ, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರ ವಿಷಯದಲ್ಲಿ ಪಿತೂರಿ ಮಾಡಿ ಅವರನ್ನು ಟ್ರ್ಯಾಪ್ ಮಾಡಿಸಿರುವುದು ಯಾರು ಎನ್ನುವುದು ಬಳ್ಳಾರಿ ಅಷ್ಟೇಅಲ್ಲ ಇಡಿ ರಾಜ್ಯಕ್ಕೆ ಗೊತ್ತಿದೆ, ಇದರ ಜೊತೆಗೆ ಮಾಜಿ ಸಚಿವ ಎಚ್.ವೈ.ಮೇಟಿ ಅವರ ವಿರುದ್ಧ ರಾಸಲೀಲೆ ಸಿಡಿ ಪ್ರಕಾರಣ ಮಾಡಿಸಿರುವುದು ಯಾರು ಎನ್ನುವುದು ರಾಜ್ಯದ್ಯದ ಜನರಿಗೆ ಗೊತ್ತಿದೆ. ಇನ್ನು ತಮ್ಮಲ್ಲಿ ವಿವಿಧ ಗಣ್ಯರ 19 ಸಿಡಿಗಳು ನನ್ನ ಬಳಿ ಇವೆ ಎಂದು ತಾವು ಹೇಳಿದ್ದು, ಅವುಗಳನ್ನು ಕೂಡಲೇ ಬಹಿರಂಗಳಿಸಬೇಕು, ಇಲ್ಲಿವರೆಗೆ ಅವನ್ನು ಯಾಕೆ ಬಹಿರಂಗ ಗೊಳಿಸಿಲ್ಲ ಎನ್ನುವುದು ಅನುಮಾನ ಮೂಡಿಸಿದೆ. ತಾಕತ್ತಿದ್ದರ ತಮ್ಮಲ್ಲಿರುವ ಸಿಡಿಗಳನ್ನು ಬಿಡುಗಡೆಗೊಳಿಸಿ ಎಂದು ಡಿ.ವಿಜಯಕುಮಾರ್ ಸವಾಲು ಹಾಕಿದ್ದಾರೆ.
ಬಳ್ಳಾರಿಯಲ್ಲಿ ಸಾಕಷ್ಟು ಅಧಿಕಾರಿಗಳು ನಿಮ್ಮಿಂದ ನಾನಾ ರೀತಿಯ ಎಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ, ಅನಿವಾರ್ಯವಾಗಿ ಅಧಿಕಾರಿಗಳು ನಿಮ್ಮ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ವಿಜಯಕುಮಾರ್ ಆರೋಪಿಸಿ, ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನಮ್ಮ ಜೆಡಿಎಸ್ ಪಕ್ಷದಿಂದ ಉಗ್ರವಾದ ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮುನ್ನ ಬಾಯಿ, ಜಿಲ್ಲಾ ವಕ್ತಾರರಾದ ಎಸ್.ಯಲ್ಲನ ಗೌಡ, ಜಿಲ್ಲಾ ಖಜಾಂಚಿ ಕೆ.ಶ್ರೀನಿವಾಸ್‍ರಾವ್, ಹಿರಿಯ ಮುಖಂಡ ವಾದಿರಾಜ್ ಶೆಟ್ಟಿ ಮೊದಲಾದವರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *