ಸೇಡಂ : ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಶಾಸಕ ತೇಲ್ಕೂರ್ ಚಾಲನೆ
ಸೇಡಂ,ಮಾ,07:ತಾಲೂಕಿನ ಆರಾಧ್ಯ ದೇವರಾದ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವಸ್ಥಾನದ ಒಳ ಚಾವಣಿ ಹಾಗೂ ಗ್ರ್ಯಾನೆಟ್ ಗೆ 35 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಹಾಗೂ ಈಕರಾ ಸಾರಿಗೆ ಸಂಸ್ಥೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರರಾದ ಬಸವರಾಜ್ ಬೆಣ್ಣಿಶಿರೂರ, ಬಿಜೆಪಿ ಮುಖಂಡರು, ತಾಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.