ಪುರಂದರದಾಸರ ಆರಾಧನೆ: ಹಿರಿಯ ಪತ್ರಕರ್ತ ಕುಲಕರ್ಣಿಗೆ ಸನ್ಮಾನ
ವಿಜಯಪುರ, -ನಗರದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಭಯ ಹಸ್ತ ಫೌಂಡೇಶನ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪುರಂದರದಾಸರ ಆರಾಧನೆ ಅಂಗವಾಗಿ ಪುರಂದರ ನಮನ ಹಾಗೂ ಸಾಧಕರ ಸನ್ಮಾನದಲ್ಲಿ ಹಿರಿಯ ಪತ್ರಕರ್ತ ಬಾಬುರಾವ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆನಂದ ಜೋಶಿ, ಶೇಷರಾವ್ ಮಾನೆ, ಅಬ್ದುಲ್ ಹಮೀದ, ಪಂ.ವೇದನಿಧಿ ಆಚಾರ್ಯ, ಗೋವಿಂದರಾಜ ದೇಶಪಾಂಡೆ, ಕೃಷ್ಣಾ ಕುಲಕರ್ಣಿ, ರವಿ ಕುಲಕರ್ಣಿ, ಸಂತೋಷ ಕವಲಗಿ, ಪ್ರಮೋದ ದೇಶಪಾಂಡೆ, ಕೆ.ಕೆ.ಬನ್ನಟ್ಟಿ, ವಿಜಯ ನಾಮಣ್ಣವರ, ನದೀಮ ಇನಾಮದಾರ ಮೊದಲಾದವರು ಉಪಸ್ಥಿತರಿದ್ದರು.