ಸಿಡಿ ಬಿಡುಗಡೆಗೆ 15 ಕೋಟಿ ವೆಚ್ಚ: ಸಿಬಿಐ ತನಿಖೆಗೆ ಬಾಲಚಂದ್ರ ಆಗ್ರಹ
ಬೆಂಗಳೂರು, – ಮಾಜಿ ಸಚಿವ ರಮೇಶ್ ಜಾರಕಿ ಹೊಳಿಯವರದು ಎನ್ನಲಾದ ರಾಸಲೀಲೆ ಪ್ರಕರಣದ ವಿಡಿಯೋ ಬಿಡುಗಡೆ ಮಾಡಲು 15 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದು ಆರೋಪಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಈ ಪ್ರಕರಣ ಹನಿಟ್ರ್ಯಾಪ್ ಎಂದು ಹೇಳಿದ್ದಾರೆ.
ಇದೊಂದು ನಕಲಿ ಸಿಡಿಯಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಅವರು ಒತ್ರಾಯಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೊಡ್ಡ ಷಡ್ಯಂತ್ರವಿದ್ದು, ಸಂತ್ರಸ್ಥ ಮಹಿಳೆ ಅಂತ ಕರೆಯಬೇಡಿ. ಕಲ್ಲಹಳ್ಳಿ ದೂರು ದಾಖಲಿಸುವ ಮುನ್ನವೇ ಮೂರು ಗಂಟೆ ಮೊದಲು ರಷ್ಯಾದಲ್ಲಿ ವೀಡಿಯೋ ಅಪ್ಲೋಡ್ ಮಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜಾರಕಿಹೊಳಿ ಕುಟುಂಬದ ಹೆಸರು ಹಾಳು ಮಾಡಲು ಷಡ್ಯಂತ್ರ ಮಾಡಲಾಗಿದೆ. ಹಾಗಾಗಿ ಈ ಸಂಬಂಧ ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳು ನೀಡಬೇಕು. ರಮೇಶ್ ಜಾರಕಿಹೊಳಿ ಅವರು ಮನೆಯಿಂದ ಹೊರ ಬಂದು ದೂರು ದಾಖಲಿಸಬೇಕು. ನಮಗೆ ದೂರು ನೀಡಲು ಅನುಮತಿ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿದರು.
ಮೂಲಗಳ ಪ್ರಕಾರ ಮಹಿಳೆ ಮುಂದೆ ತನ್ನ ಭವಿಷ್ಯದ ಬಗ್ಗೆ ಆ ಕಾಣದ ಕೈಗಳಿಗೆ ಕೇಳಿದಾಗ ಆಕೆಗೆ 50 ಲಕ್ಷ ನಗದು ಮತ್ತು ದುಬೈನಲ್ಲಿ ಕೆಲಸ ಕೊಡಿಸೋದಾಗಿ ಆಮಿಷವೊಡ್ಡಿದ್ದಾರೆ. 15 ಕೋಟಿ ಹಣ ವ್ಯಯ ಮಾಡಿ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಮಹಿಳೆ ಹಿಂದೆ ಇಬ್ಬರು, ಇಬ್ಬರ ಹಿಂದೆ ಮೂವರು ಮತ್ತು ಮೂವರ ಹಿಂದೆ ನಾಲ್ಕು ಜನ ವ್ಯವಸ್ಥಿತವಾಗಿ ವೀಡಿಯೋ ಹರಿಬಿಟ್ಟಿದ್ದಾರೆ. ಆದ್ರೆ ವೀಡಿಯೋ ಅಪ್ಲೋಡ್ ಮಾಡಿದವರ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದರು.