ಇಂದು ಸಿಎಂ 8ನೇ ಬಜೆಟ್ ಮಂಡನೆ..! ಬಿಎಸ್‌ವೈ ಸೂಟ್‌ಕೇಸ್‌ನಲ್ಲಿ ಏನಿರುತ್ತೆ..? ಯಾವುದು ಹೊಸ ಯೋಜನೆ?
ರಾಜ್ಯ ಬಜೆಟ್ಗೆ ಕ್ಷಣಗಣನೆ ಆರಂಭ ಆಗಿದೆ. ಇಂದು ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಮುಂಗಡಪತ್ರವನ್ನ ಮಂಡಿಸಲಿದ್ದಾರೆ. ರಾಜ್ಯದ ಜನರಿಗೆ ಏನೇನು ಸಿಗುತ್ತೆ , ಬಿಎಸ್‌ವೈ ಸೂಟ್‌ಕೇಸ್‌ನಲ್ಲಿ ಏನಿರುತ್ತೆ ಅನ್ನೋದರತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ.
ಇಂದು 2021-22 ನೇ ಸಾಲಿನ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಸಿದ್ದತೆ ನಡೆಸಿದ್ದಾರೆ. ನಾಳೆ ಮಧ್ಯಾನ 12.05ಕ್ಕೆ ಅಭಿಜಿನ್ ಲಗ್ನದಲ್ಲಿ ಬಿಎಸ್‌ವೈ ತಮ್ಮ 8 ನೇ ಮುಂಗಡಪತ್ರವನ್ನ ಮಂಡಿಸಲಿದ್ದಾರೆ. ಎಂಟನೇ ಬಾರಿಗೆ ಬಜೆಟ್ ಮಂಡಿಸಲು ಸಿದ್ದವಾಗಿರುವ ಯಡಿಯೂರಪ್ಪ ಕೊರೋನಾ ನಡುವೆಯೂ ಜನ ಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಿದ್ದಾರೆ ಎನ್ನಲಾಗಿದೆ.ಆರೋಗ್ಯ, ಕೃಷಿ, ಕೈಗಾರಿಕೆ, ಶಿಕ್ಷಣ, ನೀರಾವರಿ, ಬೆಂಗಳೂರು ಸೇರಿದಂತೆ ಸಮಗ್ರ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟು ಬಜೆಟ್ ಮಂಡಿಸಲಿದ್ದಾರೆ.
ಪೆಟ್ರೋಲ್, ಡಿಸೇಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೀಗಾಗಿ ಇಂಧನದ ಮೇಲಿನ ತೆರಿಗೆ ಕಡಿತಕ್ಕೂ ಕೂಗು ಎದ್ದಿದೆ. ಜೊತೆಗೆ ನಾಲ್ಕು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಅನುಭವ ಮಂಟಪ ಸೇರಿದಂತೆ ಆ ಭಾಗಕ್ಕೆ ವಿಶೇಷ ಅನುದಾನ ನೀಡುವ ನಿರೀಕ್ಷೆ ಕೂಡ ಇದೆ.
ಒಟ್ಟಿನಲ್ಲಿ 2020-21 ನೇ ಸಾಲಿನಲ್ಲಿ 2.37 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಆದ್ರೆ ಈ ಬಾರಿಯ ಬಜೆಟ್ ಗಾತ್ರ ಕಡಿಮೆ ಆಗುವ ಸಾಧ್ಯತೆ ಇದೆ. ಇಂದಿನ ಬಜೆಟ್‌ನಲ್ಲಿ ಏನಿರುತ್ತೆ. ಬಿಎಸ್‌ವೈ ಸೂಟ್‌ಕೇಸ್‌ನಲ್ಲಿ ರಾಜ್ಯದ ಜನರಿಗೆ ಸಿಹಿ ಸಿಗುತ್ತಾ ಅನ್ನೋದು ಕಾದು ನೋಡಬೇಕಿದೆ.