ರಿಲೀಸ್ಗೂ ಮೊದಲೇ ‘KGF’ ದಾಖಲೆಯನ್ನ ಹಿಂದಿಕ್ಕಿದ ‘ರಾಬರ್ಟ್’..! ಥಿಯೇಟರ್ಗೆ ಬರುವ ಮುಂಚೆಯೇ ಕೋಟಿ ಕೋಟಿ ಕಲೆಕ್ಷನ್.!
ರಾಬರ್ಟ್ ಬರೀ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಆರ್ಭಟಿಸಲು ರೆಡಿಯಾಗಿರೋ ಸಿನಿಮಾ. ಈಗಾಗಲೇ ಸಾಕಷ್ಟು ಸ್ಯಾಂಪಲ್ಸ್ಗಳ ಮೂಲಕ, ಬಣ್ಣದ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ ‘ರಾಬರ್ಟ್’ ಅಡ್ಡದಿಂದ ಸೋಮವಾರ ಬೆಳಗ್ಗೆ 10 ಗಂಟೆ 4ನಿಮಿಷಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ನ್ಯೂಸ್ವೊಂದು ಕಾದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ‘ರಾಬರ್ಟ್’. ಈಗಾಗಲೇ ಟ್ರೈಲರ್, ಸಾಂಗ್ಗಳಿಂದ ಬರೀ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಹೊಸ ಚರಿತ್ರೆ ಸೃಷ್ಟಿ ಮಾಡಿದೆ. ಇನ್ನು ದರ್ಶನ್ ಸಿನಿಮಾ ಅಂದ್ರೆ ಸಾಕು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಕಣ್ಣು-ಬಾಯಿ ಬಿಟ್ಕೊಂಡು ವೈಟ್ ಮಾಡ್ತಾರೆ. ಅಂತಹದ್ರಲ್ಲಿ ಡಿ-ಬಾಸ್ ದರ್ಶನ್ ಒಂದೂವರೆ ವರ್ಷಗಳ ನಂತ್ರ ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ರಾಬರ್ಟ್ ಆಗಿ ಬರ್ತಿದ್ದಾರೆ ಅಂದ್ರೆ ಸುಮ್ನೆನಾ ಹೇಳಿ, ಹೀಗಾಗಿ ದಚ್ಚು ಭಕ್ತಗಣ ದರ್ಶನ್ ಕಣ್ತುಂಬಿಕೊಳ್ಳಲು ದಿನಗಣನೆ ಎಣಿಸುತ್ತಿದ್ದಾರೆ.
ರಾಬರ್ಟ್ ಅಡ್ಡದಿಂದ ದಿನಕ್ಕೊಂದು ಸರ್ಪ್ರೈಸ್, ದಿನಕ್ಕೊಂದು ನ್ಯೂಸ್ ಬರ್ತಾನೆ ಇದೆ. ಇನ್ನು ಗಾಂಧಿನಗರ ಟು ಟಾಲಿವುಡ್ ಅಂಗಳದಲ್ಲಿ ರಾಬರ್ಟ್ ಚರ್ಚೆ ಜೋರಾಗಿಯೇ ಕೇಳಿ ಬರ್ತಿದೆ. ಯೆಸ್ ರಿಲೀಸ್ಗೂ ಮೊದಲೇ ಬಾಕ್ಸ್ ಆಫೀಸ್ನಲ್ಲಿ ರಾಬರ್ಟ್ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದೆ. ಹೌದು ಸಾಮಾನ್ಯವಾಗಿ ಯಾವುದೇ ಸಿನಿಮಾವಾದ್ರು ರಿಲೀಸ್ ಆದ ನಂತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತೆ. ಆದ್ರೆ ಈ ರಾಬರ್ಟ್ ರಿಲೀಸ್ಗೂ ಮೊದಲೇ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೆಕ್ಕಚಾರ ಮಾಡ್ತಿದೆ.
‘ರಾಬರ್ಟ್’ ಸಿನಿಮಾ ಮಾರ್ಚ್ 11 ಶಿವರಾತ್ರಿಯ ದಿನ ಸಖತ್ ಗ್ರ್ಯಾಂಡ್ ಆಗಿ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ದರ್ಶನ್ ಅಭಿಮಾನಿಗಳಲ್ಲಿ ರಾಬರ್ಟ್ ಸಂಭ್ರಮ ಜೋರಾಗಿದ್ದು, ಥಿಯೇಟರ್ ಮುಂದೆ ರಾಬರ್ಟ್ ಕಟೌಟ್ಗಳನ್ನ ನಿಲ್ಲಿಸಿದ್ದಾರೆ. ಹೌದು ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರೋ ಶಂಕರ್ ನಾಗ್ ಥಿಯೇಟರ್ ಮುಂದೆ ಡಿ-ಭಕ್ತಗಣ, ರಾಬರ್ಟ್ ಕಟೌಟ್ಗಳನ್ನ ನಿಲ್ಲಿಸಿ, ಅದಕ್ಕೆ ಹಾಲಿನ ಅಭಿಷೇಕ ಮಾಡಿ, ದೊಡ್ಡ ದೊಡ್ಡ ಹಾರಗಳನ್ನ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಒಟ್ಟಾರೆಯಾಗಿ ಸಾಕಷ್ಟು ವಿಶೇಷತೆಗಳಿಂದ ರಾಬರ್ಟ್ ಸಿನಿಮಾ, ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ 1400ಕ್ಕೂ ಅಧಿಕ ಥಿಯೇಟರ್ಗಳಲ್ಲಿ ರುದ್ರತಾಂಡವ ಆಡಲಿದ್ದಾನೆ.