ಸಿಲಿಕಾನ್ ಸಿಟಿಯಲ್ಲಿ ಡಿಫರೆಂಟ್​ ಶಿವರಾತ್ರಿ .! 35 ಅಡಿ ಎತ್ತರದ ಕರೋನಾ ಶಿವ ವಿಗ್ರಹ ಅನಾವರಣ..!

ಶಿವರಾತ್ರಿ ಹಬ್ಬ ಎಂದ್ರೆ ಎಲ್ಲೆಡೆ ಸಂಭ್ರಮ ಸಡಗರ. ಆದ್ರಲ್ಲೂ ಈ ಬಾರಿ ಕೊರೊನಾ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಡಿಫರೆಂಟ್​ ಆಗಿ ಶಿವರಾತ್ರಿ ಆಚರಣೆಗೆ ಮುಂದಾಗಿದ್ದಾರೆ. ಅರೇ ಈ ಬಾರಿಯ ಶಿವರಾತ್ರಿಯ ಸ್ಪೆಷಲ್​ ಏನ್ ಅಂತಾ ಯೋಚಿಸ್ತಿದ್ದೀರಾ. ಈ ಸ್ಟೋರಿ ಓದಿ..

ದೇಶದಲ್ಲಿ ಕೋವಿಡ್​ ಎರಡನೇ ಅಲೆ ಭೀತಿ ಶುರುವಾಗಿದ್ದೇ ತಡ ಸಿಟಿ ಜನ್ರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಷಕಂಠ ಮಹಾದೇವ ವಿಗ್ರಹವೊಂದನ್ನು ವಿಲ್ಸನ್​ ಗಾರ್ಡನ್​ನ ರೆಡ್​​ ಫೀಲ್ಡ್​ ಮೈದಾನಲ್ಲಿ ಅನಾವರಣ ಮಾಡಲಾಗಿದೆ. ಕೊರೊನಾ ವೈರಸ್​ ಹಾವಳಿಯನ್ನು ಕಡಿಮೆ ಮಾಡಲಿ ಎಂಬ ನಿಟ್ಟಿನಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ 35 ಅಡಿಯ ಕೊರೊನಾ ಶಿವನ ವಿಗ್ರಹವನ್ನು ಎಂಟು ಕಲಾವಿದರಿಂದ ಅರಳಿಸಲಾಗಿದೆ.

ಇದನ್ನೂ ಓದಿ: ಇಂದು ಸಿಎಂ 8ನೇ ಬಜೆಟ್ ಮಂಡನೆ..! ಬಿಎಸ್‌ವೈ ಸೂಟ್‌ಕೇಸ್‌ನಲ್ಲಿ ಏನಿರುತ್ತೆ..? ಯಾವುದು ಹೊಸ ಯೋಜನೆ?

ಶಿವನೆಂದರೆ ಆತ ರೋಗರುಜಿನ ನಿವಾರಕ. ಈ ಕಾರಣಕ್ಕಾಗಿಯೇ ಆತನಿಗೆ ನಂಜುಂಡೇಶ್ವರ ಎಂಬ ಹೆಸರಿದೆ. ಹಾಗಾಗಿ ಈ ನಂಜುಂಡ ಎಲ್ಲರಿಗೂ ಉತ್ತಮ ಆರೋಗ್ಯ ನೀಡಲಿ ಎಂಬ ಉದ್ದೇಶದಿಂದ ವಿಮೋಚನಾ ವೆಲ್​ಫೇರ್​ ಟ್ರಸ್ಟ್​ ವತಿಯಿಂದ ವಾಸ್ತುಪ್ರಕಾರ ಶಿವನ ವಿಗೃಹವನ್ನು ಸ್ಥಾಪಿಸಲಾಗಿದೆ. ಮಾರ್ಚ್​ 8 ರಿಂದ 14ರವರೆಗೆ ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಬೃಹತ್​ ಶಿವನ ವಿಗೃಹವನ್ನು ನೋಡ್ತಿದಂತೆ ಭಕ್ತಿಯ ಅಲೆಯಲ್ಲಿ ತೇಲಾಡಿಸುವಂತೆ ಈ ವಿಗ್ರಹ ಆಕರ್ಷಕವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *