ಹಳೆಯ ವಾಹನ ಸವಾರರಿಗೆ ಸಂತಸದ ಸುದ್ದಿ..! ಹಳೆ ವಾಹನ ಕೊಟ್ಟು ಹೊಸ ವಾಹನ ಖರೀದಿಸಿದ್ರೆ ಆಫರ್..!
ಹಳೆಯ ವಾಹನ ಸವಾರರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಹಳೆ ವಾಹನ ಕೊಟ್ಟು ಹೊಸ ವಾಹನ ಖರೀದಿಸುವವರಿಗೆ ಈ ಆಫರ್ ದೊರೆಯಲಿದೆ.
ನಿಮ್ಮ ಹಳೆಯ ವಾಹನ ಗುಜರಿಗೆ ಹಾಕಿ, ಪಡೆಯಿರಿ ಹೊಸ ವಾಹನ ಖರೀದಿಯಲ್ಲಿ ರಿಯಾಯಿತಿ ಸಿಗಲಿದೆ. ಕೇಂದ್ರ ಸರ್ಕಾರ ಈ ಹಿಂದೆ 20 ವರ್ಷಕ್ಕೂ ಹೆಚ್ಚಿನ ಹಳೆಯ ವಾಹನಗಳನ್ನು ಗುಜರಿಗೆ ಸ್ವಯಂಪ್ರೇರಿತವಾಗಿ ಹಾಕುವಂತ ನೀತಿಯನ್ನ ಜಾರಿಗೆ ತಂದಿತ್ತು. ಇದರ ಭಾಗವಾಗಿ, ಈಗ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸಿದ್ರೇ, ಆಟೋಮೊಬೈಲ್ ಕಂಪನಿಗಳಿಂದ ಶೇ.5ರಷ್ಟು ರಿಯಾಯಿತಿ ಕೊಡಲಾಗಿದೆ. ಈ ಮೂಲಕ ಹಳೆಯ ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿದಂತ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಹಳೆಯ ವಾಹನಗಳನ್ನು ಸ್ವಇಚ್ಛೆಯಿಂದ ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಇದು ದೇಶದ ಆಟೋಮೊಬೈಲ್ ಉದ್ಯಮಕ್ಕೆ ವರದಾನವಾಗಿ ಪರಿಣಮಿಸಿದೆ. ಅಲ್ಲದೇ ಇದರಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಗುಜರಿ ನೀತಿಯ ಅಡಿಯಲ್ಲಿ ಹಳೆಯ ವಾಹನ ಗುಜರಿಗೆ ಹಾಕಿ, ಹೊಸ ವಾಹನ ಖರೀದಿ ಮಾಡುವವರಿಗೆ ಆಟೋಮೊಬೈಲ್ ಕಂಪನಿಗಳು ಶೇ.5ರಷ್ಟು ರಿಯಾಯಿತಿ ನೀಡಲಿವೆ.