ಗೆಳತಿಯೇ ನೀ ಸಿಗುವೆಯಾ….? / Article By Soumya Pujar / 1sr Year Journalism Student , Sharanabasava University
ಯಾವುದೋ ಪ್ರೇಮ ಕಥೆ ಅಂದುಕೊಂಡಿರಾ…? ಖಂಡಿತ ಇಲ್ಲ . ಗೆಳತಿಯನ್ನು ಹುಡುಕುತ್ತಿರಿವ ಪರಿ. ಸಾಮಾನ್ಯವಾಗಿ ಹರಟೆ , ತಮಾಷೆ , ಜಗಳ ಇವೆಲ್ಲವೂ ಗೆಳೆತನದಲ್ಲಿ ಸಹಜ . ಇದನ್ನು ಬಿಟ್ಟರೆ ಗೆಳೆತನ ಲೋಕವೇ ಬೇರೆ . ಅಲ್ಲಿ ನಮ್ಮನ್ನೇ ನಾವು ಮರೆತು ಖುಷಿಯಿಂದ ಗಾಳಿಯಲ್ಲಿ ತೇಲಾಡುವ ಅನುಭವ .
ಶಾಲೆ , ಕಾಲೇಜಿನಲ್ಲಿ ಮಾತ್ರ ಒಟ್ಟಿಗಿರದೆ ಅವರವರ ಮನಸ್ಸಿನಲ್ಲಿಯೂ ಸದಾ ಒಟ್ಟಿಗಿರುವುದೇ ನಿಜವಾದ ಗೆಳೆತನ . ಅಂದರೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತ , ನೋವು ನಲಿವಿನಲ್ಲೂ ಭಾಗಿಯಾಗುವುದೇ ಆತ್ಮೀಯತೆ . ಆ ಆತ್ಮೀಯತೆ ಕೇವಲ ಗೆಳೆತನದಲ್ಲಿ ಮಾತ್ರ ಸಿಗಲು ಸಾಧ್ಯ . ಹೀಗೆ ಗೆಳೆತನದ ಬಗ್ಗೆ ಎಷ್ಟು ಹೇಳಿದರು ಮುಗಿಯದು .
ಆದರೆ ಅವಳು ಎಲ್ಲಿದ್ದಾಳೆ..? , ಹೇಗಿದ್ದಾಳೆ..? ಯಾರಿಗಾದರೂ ಗೊತ್ತೇ ?. ಆಗ ನನಗೆ 5-6 ವರ್ಷ . ನಾನು ಅವಳು ಓದಿದ್ದು ಕೇವಲ 2-3 ವರ್ಷ ಮಾತ್ರ . ಅವಳೆಂದರೆ ಎಲ್ಲರಿಗಿಂತಲೂ ಅಚ್ಚು ಮೆಚ್ಚು ನನಗೆ . ಅವಳ ಹೆಸರು ಮತ್ತು ಅವಳೊಂದಿಗಿನ ಕೆಲವೇ ಕೆಲವು ಕ್ಷಣಗಳು ನೆನಪಿನಲ್ಲಿವೆ . ಬಿಟ್ಟರೆ ಅವಳ ಆಗಿನ ಮುಖ ಕೂಡ ನೆನಪಿಲ್ಲ ನನಗೆ . ಆದರೆ ಈಗಲೂ ಅವಳನ್ನೇ ಬಯಸುತ್ತದೆ ಈ ಮನಸ್ಸು . ಒಮ್ಮೆ ಅಪ್ಪಾಜಿ ನಮ್ಮಿಬರನ್ನು ಶಾಲೆಗೆ ಬಿಟ್ಟು ಬಂದದ್ದು , ಅವಳೊಂದಿಗಿನ ಸ್ನೇಹ , ಒಡನಾಟ , ಅವಳೊಂದಿಗೆ ಆಡಿದ ಆಟ , ಎರಡು ಜುಟ್ಟು ಕಟ್ಟಿಕೊಂಡು ಕೈ ಕೈ ಹಿಡಿದು ಶಾಲೆಗೆ ಹೋಗಿತಿದ್ದ ದಿನಗಳು
ಈ ಎಲ್ಲ ನೆನಪುಗಳು ನನ್ನ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿವೆ .
ಹೇ ಗೆಳತಿಯೇ….. ಎಲ್ಲಿರುವೆ ? , ಹೇಗಿರುವೆ ? ನಿನಗೆ ನನ್ನ ನೆನಪಿಲ್ಲವೇ ? ಆ ಊರನ್ನು ಬಿಟ್ಟು 15-16 ವರ್ಷಗಳು ಕಳೆದರೂ ನಿನ್ನ ನೆನಪು ಇನ್ನು ಮರುಕಳಿಸುತ್ತದೆ . ಕೆಲವು ಗೆಳತಿಯರಿಂದ ಬೇಜಾರಾದರೆ ನಿನ್ನನೇ ನೆನಪಿಸಿಕೊಳ್ಳುತ್ತೇ ಈ ಹೃದಯ . ನನ್ನ ಇಷ್ಟು ವರ್ಷಗಳ ಪಯಣದಲ್ಲಿ ನೀನಿಲ್ಲದಿರುವುದೇ ಕೊರಗು ನನಗೆ . ಬಲ್ಲೆಯಾ ನೀನು ನನ್ನ ಜೇವನದ ಅತ್ಯಂತ ಪ್ರೀತಿಯ ಜೀವವನ್ನು ಕಳೆದುಕೊಂಡಿರುವೆ . ಆ ನೋವನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕು . ಸಿಗುವೆಯಾ ಒಮ್ಮೆ , ಕಳೆದ ಆ ದಿನಗಳ ಮತ್ತೆ ನೆನಪಿಸಿ ಕೊಳ್ಳುತ್ತ ಊಟ ಮಾಡುವ ಬಯಕೆ ಈಡೇರಿಸು ಬಾ . ನಿಜಕ್ಕೂ ನಿನ್ನ ತುಂಬಾ ನೆನೆಯುತ್ತಿದೆ ಈ ಹೃದಯ . ನಿನಗಾಗಿ ಕಾದಿದೆ ಈ ಜೀವ . ಒಮ್ಮೆ ಸಿಕ್ಕುಬಿಡು ..ನೀ ಸಿಕ್ಕ ದಿನ ನನ್ನ ಜೀವನದ ಅತ್ಯಂತ ಖುಷಿಯ ದಿನ ಆಗಿರುತ್ತದೆ . ಜೀವನವೀಡಿ ನಿನ್ನೊಂದಿಗೆ ಕಳೆಯುವೆ . ಇನ್ನು ನನ್ನ ಮುಂದಿನ ಜೀವನದ ಪ್ರತಿ ಕ್ಷಣದಲ್ಲೂ ನೀನಿರಬೇಕು ಅಂಜಲಿ……..
ಹೇಳು ಗೆಳತಿಯೇ ನೀ ಸಿಗುವೆಯಾ….?
ಸೌಮ್ಯ ಪೂಜಾರ
ಪರ್ತಿಕೋದ್ಯಮ ವಿದ್ಯಾರ್ಥಿನಿ
ಶರಣಬಸವ ವಿಶ್ವವಿದ್ಯಾಲಯ
ಕಲಬುರಗಿ