ಸಮುದ್ರದ ಆಳಕ್ಕಿಳಿದ ನಂಬಿಕೆ -ವಾತ್ಸಲ್ಯ / Article By ಅಕ್ಷತಾ ಅರಳಗುಂಡಗಿ / 1sr Year Journalism Student , Sharanabasava University
ನಂಬಿಕೆ ಎನ್ನುವುದು ಜೀವನದಲ್ಲಿ ಪ್ರಮುಖ ಪಾತ್ರವಹಿಸುವ ಒಂದು ಮಹತ್ವವಾದ ಘಟ್ಟವಾಗಿದೆ, ಈ ನಂಬಿಕೆ ಹೇಗಿದೆಯೆಂದರೆ ಈಗಿನ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ವಿಶ್ವಾಸ ,ನಂಬಿಕೆ, ವಾತ್ಸಲ್ಯ ನಶಿಸಿ ಹೋಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಂದು ನನ್ನ ಅಭಿಪ್ರಾಯ.
ಇದು ಯಾಕೆ ಪ್ರತಿಯೊಬ್ಬರಲ್ಲೂ ಕ್ಷಿಣಿಸುತ್ತ ಹೋಗುತ್ತಿದೇ? ಯಾಕೆ ಈ ಮನಸ್ಥಿತಿ ಬದಲಾಗುತ್ತಿಲ್ಲ.ಇದು ಬೆಳೆಸಿಕೊಂಡು ಬರುತ್ತಿಲವೋ ಅಥವಾ ಬೆಳೆಸಿದ್ದು ಉಳಿಸ್ತಾನೆ ಇಲ್ಲವೋ ಏನಿದರ ಸಂಗತಿ 🤔…..
ಹಿಂದಿನ ಜನರ ಮನಸ್ಥಿತಿ ಸಮಾಜದ ಆಳದಲ್ಲಿರುವ ಚಿಪ್ಪಿನಲ್ಲಿರುವ ಮುತ್ತು ಇದ್ದಂತೆ. ಅಂದರೆ, ಆ ಚಿಪ್ಪು ಹೇಗೆ ನೋಡೋಕೆ ವಾರಾಟಾಗಿದ್ದರು ಸಹ ಒಳಗಡೆ ಇರುವ ಮನಸ್ಸು ಮುತ್ತಿನಂತೆ ಹೊಳೆಯುವಂತೆ ನಿಸ್ಕಲ್ಮಷ ಹೃದಯದಂತ ಮನಸ್ಥಿತಿ ಅವರದಾಗಿತ್ತು.
ಸಮುದ್ರದ ಆಳದಲ್ಲಿರುವ ನಂಬಿಕೆ ಅಂದಕ್ಷಣ ಸಮುದ್ರದ ಮಟ್ಟಕ್ಕೆ ಆಳವಾಗಿರುವುದಲ್ಲ. ನಾನು ಹೇಳುತ್ತಿರುವುದೇನೆಂದರೆ, ಸಮುದ್ರದ ಆಳ ಹೋದಂತೆಲ್ಲ ನಿಸರ್ಗದ ಸ್ವರ್ಗ, ಎಲ್ಲದರ ಜೀವನಾಡಿಗಳು, ಮತ್ತೆ ಎಷ್ಟೊಂದು ನಿರ್ಮಲವಾದ ಹೃದಯ ಮನಸ್ಥಿತಿ ಈಗಿನ ಜನರ ಪ್ರಪಂಚದ ಜನರಲ್ಲಿರಲು ಕಷ್ಟಸಾಧ್ಯ ಅಲ್ಲವೇ?😶
ಅಕ್ಷತಾ ಅರಳಗುಂಡಗಿ.
ಪತ್ರಿಕೋದ್ಯಮ ವಿದ್ಯಾರ್ಥಿನಿ
ಶರಣ ಬಸವ ವಿಶ್ವವಿದ್ಯಾಲಯ
ಕಲಬುರಗಿ