ಈ ಬಾರಿಯ ಬಜೆಟ್‌ನಲ್ಲಿ ಮುದ್ರಾಂಕ ಶುಲ್ಕದಲ್ಲಿ ಏರಿಕೆ ಇಲ್ಲ..! ಫ್ಲ್ಯಾಟ್ ರಿಜಿಸ್ಟ್ರೇಷನ್ ಫೀಸ್‌ಗೂ ಕತ್ತರಿ..!
ಹೈಲೈಟ್ಸ್:
- ಮುದ್ರಾಂಕ ಶುಲ್ಕದಲ್ಲಿ ಯಾವುದೇ ಏರಿಕೆ ಆಗಿಲ್ಲ
- ಮೊದಲ ಫ್ಲ್ಯಾಟ್ ಖರೀದಿಗೆ ಮುದ್ರಾಂಕ ಶುಲ್ಕಕ್ಕೆ ಕತ್ತರಿ
- ಶೇ. 5ರಿಂದ ಶೇ. 3ಕ್ಕೆ ಕಡಿಮೆ ಮಾಡಲು ನಿರ್ಧಾರ
ಬೆಂಗಳೂರು: ಯಾವುದೇ ರೀತಿಯ ತೆರಿಗೆಗಳನ್ನೂ ಏರಿಕೆ ಮಾಡದ ಸಿಎಂ ಯಡಿಯೂರಪ್ಪ, ವಸತಿ ಹಾಗೂ ಗೃಹ ನಿರ್ಮಾಣ ಕ್ಷೇತ್ರಕ್ಕೆ ಕೊಂಚ ರಿಲೀಫ್ ಕೂಡಾ ನೀಡಿದ್ದಾರೆ.
ಮುದ್ರಾಂಕ ಶುಲ್ಕ (ರಿಜಿಸ್ಟ್ರೇಷನ್ ಫೀ)ನಲ್ಲಿ ಈ ಬಾರಿ ಯಾವುದೂ ಏರಿಕೆ ಆಗದಿರೋದು ಬಜೆಟ್ ಹೈಲೈಟ್ಸ್. ಆದ್ರೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,655 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿ ನೀಡಲಾಗಿದೆ.
ಫೆಬ್ರುವರಿ ಅಂತ್ಯಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ 9,014 ಕೋಟಿ ರೂ. ರಾಜಸ್ವವನ್ನು ಸಂಗ್ರಹ ಮಾಡಿದೆ ಎಂದು ಬಜೆಟ್‌ನಲ್ಲಿ ಸಿಎಂ ಮಾಹಿತಿ ನೀಡಿದ್ದಾರೆ.
ಫ್ಲ್ಯಾಟ್ ನೋಂದಣಿಗೆ ಪ್ರೋತ್ಸಾಹ: ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು 35 ಲಕ್ಷ ರೂ.ಗಳಿಂದ 45 ಲಕ್ಷಗಳವರೆಗಿನ ಮೌಲ್ಯದ ಅಪಾರ್ಟ್‌ಮೆಂಟ್‌ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ. 5 ರಿಂದ ಶೇ. 3ಕ್ಕೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ.
2021-22ರ ಸಾಲಿನ ಆರ್ಥಿಕ ವರ್ಷಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,655 ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದ್ದು, ಈ ಬಾರಿಯ ಟಾರ್ಗೆಟನ್ನೇ ಮುಂದುವರಿಕೆ ಮಾಡಲಾಗಿದೆ.