ಎಸ್‌.ಎಲ್‌ ಭೈರಪ್ಪರ ‘ಪರ್ವ’ ನಾಟಕ ಪ್ರದರ್ಶನಕ್ಕೆ ₹1 ಕೋಟಿ ಅನುದಾನ ಘೋಷಿಸಿದ ಬಿಎಸ್‌ವೈ

ಹೈಲೈಟ್ಸ್‌:

  • ಹಿರಿಯ ಕಾದಂಬರಿಕಾರ ಎಸ್‌ಎಲ್‌ ಭೈರಪ್ಪ ವಿರಚಿತ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ಅನುದಾನ
  • ಮೈಸೂರು ರಂಗಾಯಣದಿಂದ ತಯಾರುಗೊಂಡಿರುವ ಭೈರಪ್ಪರ ‘ಪರ್ವ’ ಕಾದಂಬರಿ ಆಧಾರಿತ ನಾಟಕ
  • ಹಿರಿಯ ರಂಗನಿರ್ದೇಶಕ ಪ್ರಕಾಶ್‌ ಬೆಳವಾಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಾಟಕ
  • ರಂಗಾಯಣ ಮೂಲಕ ರಾಜ್ಯಾದ್ಯಂತ ನಾಟಕ ಪ್ರದರ್ಶನಕ್ಕೆ ಅನುದಾನ ಬಿಡುಗಡೆ

 

ಬೆಂಗಳೂರು: 2021-22ನೇ ಸಾಲಿನ ಆಯವ್ಯಯವನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಮಂಡಿಸುತ್ತಿದ್ದಾರೆ. ಹಲವು ಕ್ಷೇತ್ರಗಳಿಗೆ ಅನುದಾನವನ್ನು ಘೋಷಿಸುವ ಮಧ್ಯೆಯೇ ಇತ್ತ ನಾಟಕ ಪ್ರದರ್ಶನಕ್ಕೂ ಒಂದು ಕೋಟಿ ಅನುದಾನವನ್ನು ಘೋಷಿಸಲಾಗಿದೆ.

ಹಿರಿಯ ಕಾದಂಬರಿಕಾರ ಎಸ್‌ಎಲ್‌ ಭೈರಪ್ಪ ಅವರ ‘ಪರ್ವ’ ಕಾದಂಬರಿಯ ನಾಟಕ ಪ್ರದರ್ಶನಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಪರ್ವ ನಾಟಕವನ್ನು ರಾಜ್ಯದಲ್ಲಿರುವ ರಂಗಾಯಣ ನಾಟಕ ತಂಡಗಳ ಮೂಲಕ ರಾಜ್ಯದೆಲ್ಲೆಡೆ ಪ್ರದರ್ಶನ ಮಾಡಲಾಗುವುದು ಎಂದು ಬಿಎಸ್‌ವೈ ತಿಳಿಸಿದ್ದಾರೆ.

ಮಹಾಭಾರತ ಆಧರಿತ ಪರ್ವ ಕಾದಂಬರಿಯನ್ನು ರಂಗನಿರ್ದೇಶಕ ಪ್ರಕಾಶ್‌ ಬೆಳವಾಡಿ ಏಳೂವರೆ ಗಂಟೆಗಳ ನಾಟಕವಾಗಿಸಿದ್ದಾರೆ. ಪ್ರಸಿದ್ಧ ರಂಗಕರ್ಮಿ ಬಿವಿ ಕಾರಂತರ ಕನಸಿನ ಕೂಸಾದ ಮೈಸೂರಿನ ರಂಗಾಯಣ ಮೂಲಕ ಮಾ.12,13, 14 ರಂದು ಪರ್ವ ನಾಟಕ ಹಬ್ಬ ಪ್ರಥಮ ಪ್ರದರ್ಶನ ನಡೆಯಲಿದೆ. ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ವಾರಕ್ಕೆ ಮೂರು ಪ್ರದರ್ಶನದಂತೆ ನಿರಂತರವಾಗಿ 25 ಪ್ರದರ್ಶನಗಳನ್ನು ನೀಡುವ ಗುರಿ ಇದೆ ಎಂದು ತಿಳಿದು ಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *