ಉತ್ತರಸೆನ್ ಪಾಟೀಲ್ ಅವರಿಗೆ ಬೀಳ್ಕೊಡುಗೆ ಸಮಾರಂಭ
ಕಾಳಗಿ: ಪಟ್ಟಣದ ಅಂಚೆ ಕಛೇರಿಯಲ್ಲಿ ಸೇವೆ ಸಲ್ಲಿಸಿರುವ ಉತ್ತರಸೆನ್ ಪಾಟೀಲ್ ಪೋಸ್ಟಮನ್ ಅವರು ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಬಡ್ತಿ ಹೊಂದಿ ಗುರುಮಿಟಕಲ ಅಂಚೆ ಕಚೇರಿಗೆ ವರ್ಗಾವಣೆಯಾಗಿರುತ್ತಾರೆ.ಅವರು ಸುಮಾರು ಐದು ವರ್ಷಗಳಿಂದ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿ ಜನರ ಪ್ರೀತಿಗೆ ಪಾತ್ರರಾಗಿರುತ್ತಾರೆ. ಅವರನ್ನು ಕಾಳಗಿ ಅಂಚೆ ಕಚೇರಿಯ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದ್ರಭದಲ್ಲಿ ಪೋಸ್ಟ್ ಮಾಸ್ಟರ್ ಖಲೀಲ್ ಅಹ್ಮದ್, ಸಹಾಯಕ ಕಿರಣ್, ಪೋಸ್ಟ್ ಮಾಸ್ಟರ್ ವಿಶ್ವನಾಥ್,ವಿರೇಶ್, ಗಣೇಶ್, ಶಿವಶಂಕರ್ ಸ್ವಾಮಿ, ಚಂದ್ರಶೇಖರ್,ಸುಧಾಕರ, ರವೀಂದ್ರಕುಮಾರ,ವೀರಶೆಟ್ಟಿ, ಗುಂಡೂರಾವ್, ಶ್ರೀಮಂತ ಮುಂತಾದವರು ಇದ್ದರು.