ಮಹಿಳಾ ದಿನಾಚರಣೆ ಅಂಗವಾಗಿ ವರ್ಣಿಕಾ ಕಲಬುರ್ಗಿ ಸಮಕಾಲೀನ ಮಹಿಳಾ ಕಲಾವಿದರ ಸಮೂಹ ಪ್ರದರ್ಶನ

ಮಹಿಳೆಯರು ಜಾನಪದ ಸಂಸ್ಕøತಿಯ ಮೂಲ ಕಲಾವಿದರು ಎಂದು ಚಿತ್ರಕಲಾ ಸಂಶೋಧಕಿ ಶಿಲ್ಪಾ ಮುಡಬಿ ಅವರು ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮಾ ಗುರುಪ್ಪಾ ಅಂದಾನಿ ಆರ್ಟ ಗ್ಯಾಲರಿಯಲ್ಲಿ ಸೋಮವಾರ ಅಂತರಾಷ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವರ್ಣಿಕಾ ಕಲಬುರ್ಗಿ ಸಮಕಾಲೀನ ಮಹಿಳಾ ಕಲಾವಿದರ ಸಮೂಹ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಭಾರತೀಯ ಸಂಸ್ಕ್ರತಿಯಲ್ಲಿ ಕಲೆ ವಂಶ ಪರಂಪರಾಗತವಾಗಿ ಬೆಳೆದು ಬಂದಿದ್ದು ಅದನ್ನು ಸರಂಕ್ಷಿಸಿ ಮುಂದುವರೆಸಿ ಕೊಂಡು ಹೋಗಬೇಕಾಗಿದೆ. ಮಹಿಳೆಯರು ಜಾನಪದ ಸಂಸ್ಕ್ರತಿಯ ಮೂಲ ಕಲಾವಿದರಾಗಿದ್ದಾರೆ. ಅವರು ತಮ್ಮ ದಿನ ನಿತ್ಯದ ಕೆಲಸಗಳ ಮಧ್ಯೆ ಆ ಕೆಲಸದ ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಲೆಯನ್ನು ಅನುಭವಿಸುತ್ತಾ ಅದರ ಬೆಳವಣಿಗೆಗೆ ಕಾರಣಿ ಕರ್ತರಾಗಿದ್ದಾರೆ ಇಂದು ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಈ ಪ್ರದರ್ಶನ ಈ ಭಾಗದ ಮಹಿಳಾ ಕಲಾವಿದರಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.


ಜಿಮ್ಸ್ ಅಸೋಸಿಯೆಟ್ ಪ್ರೊಫೆಸರ್ ಡಾ ರೂಪಾ ಪಾಟೀಲ್ ಅವರು ಮಾತನಾಡಿ, ಕಲಾಕೃತಿಯಲ್ಲಿ ತಮ್ಮ ಭಾವನೆಗಳನ್ನು ಐದು ಕಲಾವಿದೆಯರು ವಿವಿಧ ವಿಷಯಗಳ ಆಯ್ದುಕೊಂಡು ಸಂಸ್ಕ್ರತಿ ಪರಂಪರೆಯನ್ನ ಕೃತಿಗಳ ಮೂಲಕ ವ್ಯಕ್ತಪಡಿಸಿದ್ದಾರೆ ಎಂದರು.

ಕರ್ನಾಟಕ ಲಲಿಕಲಾ ಅಕ್ಯಾಡೆಮಿ ಸದ್ಯಸ ಹಣಮಂತ್ ಮಂತಟ್ಟಿ ಅವರು ಮಾತನಾಡಿ, ಕಲಬುರ್ಗಿಯಲ್ಲಿ ಅನೇಕ ಮಹಿಳಾ ಕಲಾವಿದರ ದಂಡೆ ಇದ್ದು ಅವರಿಂದ ಇನ್ನೂ ಉತ್ತಮವಾದ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಡಾ. ವ್ಹಿ.ಜಿ.ಅಂದಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ವೈಜ್ಝಾನಿಕ ಬೆಳವಣಿಗೆ ತುಂಬಾ ಸಹಕಾರಿಯಾಗಿದೆ ಡಾರ್ವಿನ್ ಅಂತಹವರು ಕೂಡಾ ಕಲೆಯನ್ನು ಅವಲಂಬಿಸಿದ್ದರು. ಕಲಾವಿದರಿಗೆ ಕಲಾ ಪ್ರದರ್ಶನಗಳು ಒಂದು ರೀತಿಯ ಪರೀಕ್ಷೆ ವಾತಾವರಣವನ್ನು ನಿರ್ಮಾಣವಾಗುತ್ತವೆ ಹಾಗೂ ಕಲಾ ಪ್ರದರ್ಶನ ಮಾಡಿದಾಗ ನೋಡುಗ ಜೊತೆ ಕಲಾವಿದರ ಮುಖಾ ಮುಖಿಯಾಗುತ್ತವೆ ಎಂದುಹೇಳಿದರು.

 


ಖ್ಯಾತ ಕಲಾವಿದೆ ಅನೂಷಾ ಜಿ. ಕಾಂತಾ ಮತ್ತು ಅಶ್ವಿನಿ ಎಸ್. ಪಾಟೀಲ್ ಅವರನ್ನು ಸನ್ಮಾನಿಸಿದರು. ಕಲಾ ಪ್ರದರ್ಶನದಲ್ಲಿ ಚಿತ್ರ ಕಲಾವಿದೆಯರಾದ ಗಂಗಮ್ಮಾ ಬಿ. ವಾಲಿಕರ್, ಕವಿತಾ ಎಸ್. ಕಟ್ಟೆ, ಕಾವೇರಿ ಎಚ್. ಪೂಜಾರ್, ಮಹಾಂತೇಶ್ವರಿ ಎ. ಕಂಠಿ, ನಯನಾ ಬಾಬುರಾವ್ ಅವರು ಅರ್ಕ್ಯಾಲಿಕ್ ಮಾಧ್ಯಮದಲ್ಲಿ ಮತ್ತು ರೇಖಾಚಿತ್ರಗಳು ಹಾಗೂ ಪ್ರಿಂಟ್‍ಗಳನ್ನು ಪ್ರದರ್ಶಿಸಿದರು.

 


ಮಹಾಂತೇಶ್ವರಿ ಎ. ಕಂಠಿ ಅವರು ಸ್ವಾಗತಿಸಿದರು. ಗಂಗಮ್ಮಾ ವಾಲಿಕರ್ ಅವರು ಸ್ವಾಗತಗೀತೆ ಹಾಡಿದರು. ನಯನಾ ಅವರು ವಂದಿಸಿದರು. ಹಿರಿಯ ಕಲಾವಿದ ವಿಜಯ್ ಹಾಗರಗುಂಡಗಿ, ಬಸವರಾಜ್ ಜಾನೆ ಹಾಗೂ ಮಂಜುಳಾ ಜಾನೆ, ಬಾಬುರಾವ್ ಎಚ್, ಸಂತೋಷ್ ರಾಠೋಡ, ಗಿರೀಶ್ ಕುಲಕರ್ಣಿ, ಸಂತೋಷ್ ಚಿಲಶೆಟ್ಟ, ಡಾ. ಕಾಶಿನಾಥ್ ಅಂಬಲಗಿ, ರಾಜಶೇಖರ್ ಎಸ್, ಶೇಷರಾವ್ ಬಿರಾದಾರ್, ಗೌತಮ್ ಅಂದಾನಿ, ಗೌರೀಶ್ ಅಂದಾನಿ, ಪ್ರಕಾಶ್ ಗಡಕರ್, ಲೋಕಯ್ಯಾ ಎಂ, ಮಹ್ಮದ್ ಅಯಾಜೊದ್ದೀನ್ ಪಟೇಲ್, ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಾರ್ಚ್ 10ರವರೆಗೆ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಸಾರ್ವಜನಿಕರು, ಕಲಾವಿದರು, ಕಲಾಸಕ್ತರು ಚಿತ್ರಕಲಾ ಪ್ರದರ್ಶನ ವೀಕ್ಷಿಸಬಹುದು ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ್ ಎಂ. ಜೋಶಿ ಅವರು ತಿಳಿಸಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *