ಕಲಬುರಗಿ : ವಚನಗಳ ಪಾಲನೆಯಿಂದ ಮಹಾತ್ಮರಾಗಲು ಸಾಧ್ಯ
ಕಲಬುರಗಿ : ವಿಶ್ವಗುರು ಬಸವಣ್ಣನವರು ನೀಡಿದ ಸಪ್ತಸೂತ್ರದ ವಚನವಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ, ಇದರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಎಂಬ ವಚನ ಯಾರು ತಮ್ಮ ಜೀವನದಲ್ಲಿ ತಪ್ಪದೇ ಪಾಲಿಸುತ್ತಾರೆಯೋ, ಅವರು ಮಹಾತ್ಮರಾಗಲು ಸಾಧ್ಯವಿದೆಯೆಂದು ಸಾವಳಗಿ ಶಿವಲಿಂಗೇಶ್ವರ ಸಂಸ್ಥಾನ ಮಠದ ಪರಮ ಪೂಜ್ಯ ಗುರುನಾಥ ಮಹಾಸ್ವಾಮೀಜಿಗಳು ಅಭಿಮತ ವ್ಯಕ್ತಪಡಿಸಿದರು.
ನಗರದ ಕೈಲಾಸ ನಗರದಲ್ಲಿರುವ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವಾರಾತ್ರಿ ನಿಮಿತ್ಯ 11 ದಿವಸಗಳ ಕಾಲ ಜರುಗುತ್ತಿರುವ ಹಾರಕೂಡ ಮಠದ ಲಿಂ.ಚನ್ನಬಸವ ಶಿವಯೋಗಿಗಳ ಪುರಾಣ ಕಾರ್ಯಕ್ರಮದ ಎಂಟನೇ ದಿನವಾದ ಭಾನುವಾರ ಸಂಜೆ ದೇವಸ್ಥಾನ ಸಮಿತಿಯ ವತಿಯಿಂದ ಬಡಾವಣೆಯ ನಿವಾಸಿಗಳಾದ ನಿವೃತ್ತ ನೌಕರರಿಗೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ದರ್ಜೆಯೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗೆ ಹಮ್ಮಿಕೊಂಡಿದ್ದ ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮತನಾಡುತ್ತಿದ್ದರು.
ಎಲ್ಲರೂ ತಾಯಿಯ ಉದರದಿಂದ ಜನಿಸಿದರು ಕೂಡಾ ಕೆಲವರು ಮಾತ್ರ ಮಹಾತ್ಮರಾಗಿದ್ದಾರೆ. ಇದಕ್ಕೆ ಉತ್ತಮವಾದ ಸಂಸ್ಕಾರ, ಪರೋಪಕಾರ ಗುಣ, ಸೇವಾಮನೋಭಾವನೆ, ಸಮಾಜದ ಕಷ್ಟಕ್ಕೆ ಮಿಡಿಯುವ ಮನಸ್ಸುಗಳು ಕಾರಣವಾಗುತ್ತವೆ. ನಾವು ಮಾಡಿರುವ ಪುಣ್ಯದ ಕಾರ್ಯಗಳು ನಮ್ಮ ಕಷ್ಟದ ಸಂದರ್ಭದಿಂದ ಪಾರು ಮಾಡುವದರಿಮದ ಎಲ್ಲರೂ ಸಮಾಜಕ್ಕೆ ಹಿತವಾದ ಕಾರ್ಯವನ್ನು ಮಾಡಬೇಕೆಂದು ಹಿತವಚನ ಹೇಳಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ನಿವೃತ್ತ ಶಿಕ್ಷಕ ಲಗಮಣ್ಣ ಕರಗುಪ್ಪಿ ಮಾತನಾಡಿ, ಶಿವಲಿಂಗೇಶ್ವರರು ಮಹಾನ ಪವಾಡ ಪುರುಷ. ಭಕ್ತಿಯಿಂದ ನೆಡದುಕೊಂಡವರಿಗೆ ಇಷ್ಟಾರ್ಥ ಸಿದ್ಧಿಯಾಗಲು ಸಾಧ್ಯವಿದೆ. ಸೇವೆಯಿಂದ ನಿವೃತ್ತಿಯಾದವರಿಗೆ ಸತ್ಕರಿಸಿ, ಗೌರವಿಸುವುದು ಉತ್ತಮ ಸಂಸ್ಕøತಿಯ ಲಕ್ಷಣವಾಗಿದೆ.ಯುವಕರು ಗುರು-ಹಿರಿಯರನ್ನು ಗೌರವಿಸುವ ಸಂಸ್ಕøತಿ ಮೈಗೂಡಿಸಿಕೊಳ್ಳಬೆಕೆಂದರು.
ಸೇವಾ ನಿವೃತ್ತಿಹೊಂದಿದ ಬಡಾವಣೆಯ ಲಗಮಣ್ಣ ಕರಗುಪ್ಪಿ, ಮಲ್ಲಿಕಾರ್ಜುನ ಸಾಲಿಮಠ, ಗುಂಡಪ್ಪ ಹುಡಗಿ, ಟಿ.ನಿಂಗಪ್ಪ, ಸಿದ್ರಾಮಪ್ಪ ಭೈರಾಮಡಗಿ, ಬಸವರಾಜ ಮಠ, ಅಣ್ಣಾರಾಯ ಗರೂರ, ಪ್ರೊ.ಕ್ಷೇಮಲಿಂಗ ಬಿರಾದಾರ, ದೇವಿದಾಸ ಪಾಟೀಲ, ಶಿವರಾಯ ಕಟ್ಟಿಮನಿ, ಮಹಾದೇವಪ್ಪ ಜಾಲಾದಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಧನರಾಜ ಹಿರೋಳ್ಳಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವೇದಮೂರ್ತಿ ಗಂಗಾಧರ ಶಾಸ್ತ್ರಿಗಳು, ಸೈದಪ್ಪ ಚೌಡಪೂರ, ರವಿ ಸ್ವಾಮಿ ಗೋಟೂರ, ಆರ್.ಜಿ.ಪಾಟೀಲ, ರಾಜಕುಮಾರ ಪಾಟೀಲ, ರವಿ ಬಂಗರಗಿ, ಗಿರೀಶ ದಂಡಿನ್, ಶಿವಕುಮಾರ ಪಾಟೀಲ, ಕೃಷ್ಣಪ್ಪ ಬೆಳಮಗಿ, ರೇವಣಸಿದ್ದಯ್ಯ ಮಠ, ರಾಜೇಂದ್ರ ಬಡಿಗೇರ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಕಲ್ಯಾಣಿ, ಸಂತೋಷ ರಾಂಪುರೆ, ರಘುವೀರಸಿಂಗ್, ಮಲ್ಲಿಕಾರ್ಜುನ ಭೈರಾಮಡಗಿ, ಶಿವಕುಮಾರ ಪಾಟೀಲ, ಪ್ರೊ.ಎಚ್.ಬಿ.ಪಾಟೀಲ ಸೇರಿದಂತೆ ಬಡಾವಣೆ ಹಾಗೂ ಸುತ್ತ-ಮುತ್ತಲಿನ ಬಡಾವಣೆಯ ಅನೇಕರು ಭಾಗವಹಿಸಿದ್ದರು.