ಕಲಬುರಗಿ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಬಿರ
ಕಲಬುರಗಿ : ನಗರದ ನೂತನ ವಿದ್ಯಾಲಯ ಸಂಸ್ಥೆ ನೂತನ ಪದವಿ ಮಹಾವಿದ್ಯಾಲಯ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಿಎಪಿಯೂಸಿ ಅಧ್ಯಕ್ಷರಾದ ಡಾ ವಿವೇಕಾನಂದ ರೆಡ್ಡಿ ರಕ್ತ ದಾನ ಶಿಬಿರ ಉದ್ಘಾಟಿಸಿ ರಕ್ತ ದಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಶಿಬಿರದಲ್ಲಿ 50 ಜನ ರಕ್ತ ದಾನ ಮಾಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಉದಯ ಸರ ದೇಶಪಾಂಡೆಯವರು ಅಧ್ಯಕ್ಷತೆವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡಿದರು. ಎನ್. ಎಸ್.ಎಸ್. ಅಧಿಕಾರಿ ಡಾ ದಯಾನಂದ ಶಾಸ್ತ್ರೀ ಸ್ವಾಗತಿಸಿದರು. ರೆಡ್ ರಿಬ್ಬನ್ ಕ್ಲಬ್ ಸಂಚಾಲಕ ಜಿತೇಂದ್ರ ಕೊಥಳಿಕರ ವಂದಿಸಿದರು. ಜಿಮ್ಸ್ ರಕ್ತ ನಿಧಿ ಮುಖ್ಯಸ್ಥರಾದ ಡಾ ಜಗದೀಶ ಕಟ್ಟಮನಿ, ಶ್ರೀಮತಿ ಅರ್ಚನಾ , ಶ್ರೀಮತಿ ಶೋಭಾ ಮಲ್ಲಿಕಾರ್ಜುನ ಪರೀಟ, ಭೋಧಕ ವರ್ಗದ ಹಾಗೂ ಸಿಬ್ಭಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥತರಿದ್ದರು.