ಕಲಬುರಗಿ : ಮಹಿಳೆಯರಲ್ಲಿ ವೈಚಾರಿಕ ಮನೋಭಾವನೆ ಹೆಚ್ಚಾಗಲಿ
ಕಲಬುರಗಿ :ಮಹಿಳೆಯರು ಇಂದು ಶಿಕ್ಷಣವನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ. ಆದರೆ ಇಂದಿಗೂ ಕೂಡಾ ಮಹಿಳೆಯರು ಮೌಢ್ಯತೆ, ಕಂದಾಚಾರ, ಅಂದಶೃದ್ಧೆಗಳ ಪಾಲಿಸುತ್ತಿರುವುದು ಕಂಡು ಬರುತ್ತದೆ. ಮಹಿಳೆಯರು ಸಂಪೂರ್ಣವಾಗಿ ವೈಚಾರಿಕತೆ ಮೈಗೂಡಿಸಿಕೊಳ್ಳಬೇಕಾಗಿದೆಯೆಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧಕ್ಷೆ, ಪ್ರಗತಿಪರ ಮಹಿಳಾ ಚಿಂತಕಿ ಸೇವಂತಾ ಪಿ.ಚವ್ಹಾಣ ಅಭಿಪ್ರಾಯಪಟ್ಟರು.
ನಗರದ ಶೇಖರೋಜಾದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಂದು ಮುಂದುವರೆದು, ಕೈತುಂಬಾ ಹಣ ಸಂಪಾದಿಸಿ ಆರ್ಥಿಕವಾಗಿ ಸಬಲಳಾಗುತ್ತಿದ್ದಾಳೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ, ದೇವರ ಹೆಸರಿನಲ್ಲಿನ ಹರಕೆಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗದೆ, ಬಂದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಛಲಗಾರಿಕೆ ಬೆಳೆಸಿಕೊಳ್ಳಬೇಕು. ಮಹಿಳಾ ಸಮಾನತೆಗೆ ಬಸವಾದಿ ಶರಣರ, ಡಾ.ಅಂಬೇಡ್ಕರ್, ಸಾವಿತ್ರಿಬಾ ಫುಲೆರಂತಹ ಅನೇಕ ಮಹನೀಯರ ಕೊಡುಗೆ ಅವಿಸ್ಮರಣೀಯವಾಗಿದೆಯೆಂದರು.
ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಮಾತನಾಡಿ, ಪ್ರಕೃತಿಯ ಸಮತೋಲನೆಗೆ ಗಂಡು ಮತ್ತು ಹೆಣ್ಣು ಇಬ್ಬರೂ ಅಗತ್ಯವಾಗಿದೆ. ಹೆಣ್ಣಿನ ಬಗ್ಗೆ ಕೀಳರಿಮೆ ಬೇಡ. ಆಕೆಗೆ ದೊರೆಯಬೇಕಾದ ಎಲ್ಲಾ ಸೌಕರ್ಯಗಳನ್ನು ನೀಡಿ, ಮಹಿಳಾ ಸಬಲೀಕರಣವಾದಾಗ ಮಾತ್ರ ಲಿಂಗ ಸಮಾನತೆ ಬರಲು ಸಾಧ್ಯವಾಗುತ್ತದೆಯೆಂದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ, ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕøತ ಶಿಕ್ಷಕಿ ಭಾರತಿ ಎಸ್.ಮೈಂದರ್ಗಿ, ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಎಚ್.ಮಂಗಾಣೆ, ಬಸವರಾಜ ಎಸ್.ಪುರಾಣೆ, ಹಿರಿಯ ಆರೋಗ್ಯ ಸಹಾಯಕಿ ಪುಷ್ಪಾ ಆರ್.ರತ್ನಹೊನ್ನದ್, ಸಂಗಮ್ಮ ಬಿ.ಅತನೂರ, ನಾಗೇಶ್ವರಿ ಮುಗಳಿವಾಡಿ, ಗುರುರಾಜ ಖೈನೂರ, ಜಗನಾಥ ಗುತ್ತೇದಾರ, ರೇಶ್ಮಾ, ವಿಶ್ವನಾಥ ಗುಬ್ಬ್ಯಾಳ, ಮಂಗಲಾ ಚಂದಾಪೂರೆ, ಲಕ್ಷ್ಮೀ ಮೈಲಾರಿ, ಗಂಗಾಜ್ಯೋತಿ ಗಂಜಿ, ಅರ್ಚನಾ ಸಿಂಗೆ, ಚಂದಮ್ಮ ಮರಾಠಾ, ರಾಜೇಂದ್ರ ಎಂ.ದೇಗಾಂವ ಸೇರಿದಂತೆ ಮತ್ತಿತರರಿದ್ದರು.