ಕಾಂಗ್ರೆಸ್ ನವರಿಗೆ ಸಿಡಿ ಮಾಡುವುದು ಬಿಟ್ರೆ ಬೇರೆ ಕೆಲಸ ಇಲ್ವಾ? – ಸಿದ್ದರಾಮಯ್ಯ
ಸಿ.ಡಿ ವಿಚಾರವಾಗಿ ಎಸ್.ಟಿ ಸೋಮಶೇಖರ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸಿ.ಡಿ ವಿಚಾರದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಕೆಲವೊಂದು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಹಾಗಾದ್ರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಏನಂದ್ರು..? ಈ ಸ್ಟೋರಿ ನೋಡಿ..!
ಇಂದು ಮಾದ್ಯಮದ ಜೊತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಸಿ.ಡಿ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಇಂತಹಾ ಮನೆಹಾಳು ಕೆಲ್ಸ್ ಮಾಡೋದು ಕಾಂಗ್ರೆಸ್ ಪಕ್ಷದ ಕೆಲಸ ಎಂದು ಹೇಳಿದ್ದರು. ಇನ್ನು ಬಿಟಿವಿ ಜೊತೆ ಮಾತನಾಡಿರುವ ಸಿದ್ದರಾಮಯ್ಯ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲ 20 ಎಸ್.ಟಿ ಸೋಮಶೇಖರ್ ಕಾಂಗ್ರೆಸ್ನಲ್ಲಿದ್ದವರು ಹಾಗಾದ್ರೆ 20 ವರ್ಷದಿಂದ ಅವನೂ ಮನೆಹಾಳು ಕೆಲ್ಸ ಮಾಡ್ತಿದ್ನಾ ಎಂದು ಪ್ರಶ್ನಿಸಿದ್ದಾರೆ.
ಈ ಸಿ.ಡಿ ಕಾಂಗ್ರೆಸ್ನವರೇ ಮಾಡಿದ್ದಾರೆ ಎಂದು ಎಸ್.ಟಿ.ಎಸ್ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈ ವಿಚಾರ ನಂಗೊತ್ತಿಲ್ಲ, ಕಾಂಗ್ರೆಸ್ನವರಿಗೆ ಬೇರೆ ಏನೂ ಕೆಲ್ಸ ಇಲ್ವಾ..? ಈ ಸಿ.ಡಿ ಕಾಂಗ್ರೆಸ್ ಮಾಡಿಸಿದೆ ಎಂದಿಟ್ಟುಕೊಳ್ಳಿ, ಆ ವಿಡಿಯೋದಲ್ಲಿರುವ ಕೆಲ್ಸ ಮಾಡಿದವರು ಯಾರು..? ತಪ್ಪು ಮಾಡಿಲ್ಲ ಎಂದಾದರೆ ಕೋರ್ಟಿಗೆ ಹೋಗಿ ಸ್ಟೇ ತಂದವರು ಯಾರು..? ಭಯ ಬರಲು ಕಾರಣವೇನು..? ಇವರ ಬಗ್ಗೆಯೂ ಸಿ.ಡಿ ಇದ್ಯೋ ಏನೋ ಎಂದಿದ್ದಾರೆ. ಬಾಂಬೆ ಟೀಂ ಅನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದ್ಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಕಾಂಗ್ರೆಸ್ನವರಿಗೆ ಬೇರೆ ಏನು ಕೆಲ್ಸ ಇಲ್ವಾ..? ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ ಎಂದು ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ.