ಕರ್ನಾಟಕ ಪೊಲೀಸರಿಗೆ ಒಳ್ಳೆ ಹೆಸರಿದೆ ಯಡಿಯೂರಪ್ಪರಿಂದ ಕೆಟ್ಟವರಾಗಬೇಡಿ
ಮೈಸೂರು: ಸಿಎಂ ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ. ಇಂತಹ ಕೀಳುಮಟ್ಟದ ರಾಜಕೀಯ ಸರ್ಕಾರವನ್ನು ನಾನು ನೋಡಿಲ್ಲ. ಯಡಿಯೂರಪ್ಪರಿಗೆ ಗೂಂಡಾಗಿರಿ ಮಾಡಲು ಬರುತ್ತೆ. ಸರ್ಕಾರ ನಡೆಸಲು ಬರಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬುಧವಾರ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ಕರ್ನಾಟಕ ರಾಜ್ಯ, ಇದು ಜಾತಿಯ ರಾಜ್ಯವಲ್ಲ. ಜಾತಿಗೊಂದು ಪ್ರಾಧಿಕಾರ ಮಾಡಿ ಎಲ್ಲರೂ ದುಡ್ಡು ಹಂಚುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಇನ್ನು ನೂರಾರು ಜಾತಿಯವರು ಮುಂದೆ ಪ್ರಾಧಿಕಾರ ಕೇಳುತ್ತಾರೆ. ಯಡಿಯೂರಪ್ಪರ ಬಜೆಟ್ ಜಾತಿಯ ಬಜೆಟ್. ಅವರಿಗೆ ಬಜೆಟ್ ಮಂಡನೆ ಮಾಡೋ ನೈತಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಮೇಲೆ ಸಿಡಿ ಪ್ರಕರಣ ಇದೆ. ಅಸಲಿ ಅಥವಾ ನಕಲಿ ಏನೆಯಾದ್ರು ತನಿಖೆಯಾಗಬೇಕು. ಇದನ್ನು ಸಿಬಿಐ ತನಿಖೆ ಮಾಡಬೇಕು. ಇವರುಗಳೆ ತನಿಖೆ ಮಾಡಬಾರದು. ಒಬ್ಬೊಬ್ಬರು ಒಂದೊಂದು ಅರ್ಥ ಹೇಳುತ್ತಿದ್ದಾರೆ. 2-3-4 ಅಂತ ಹೇಳುತ್ತಿದ್ದಾರೆ. ನಾನು 5-6-7 ಅಂದ್ರೆ ಆಗುತ್ತಾ. ಏನು ಅದೆಲ್ಲಾ ಅದರ ಬಗ್ಗೆ ತನಿಖೆಯಾಗಬೇಕು ಎಂದರು. ಕಲ್ಲಹಳ್ಳಿ ದೂರು ಹಿಂಪಡೆದ ಬಗ್ಗೆ ಪತ್ತೆ ಮಾಡಬೇಕು. ಈ ಕೆಲಸವನ್ನು ಪೊಲೀಸರು ಮಾಡಬೇಕು. ಕರ್ನಾಟಕ ಪೊಲೀಸರಿಗೆ ಒಳ್ಳೆ ಹೆಸರಿದೆ. ಯಡಿಯೂರಪ್ಪರಿಂದ ಕೆಟ್ಟವರಾಗಬೇಡಿ. ನಿಮ್ಮನ್ನ ಯಡಿಯೂರಪ್ಪ ಸರ್ವೆಂಟ್ ಮಾಡಿಕೊಳ್ಳುತ್ತಾರೆ. ಪೊಲೀಸರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.
ದೀದಿ ಕಿತ್ತೂರು ರಾಣಿ ಚೆನ್ನಮ್ಮರಷ್ಟೆ ಜೋರು. ಮೋದಿಯನ್ನು ಎದರಿಸುವುದಕ್ಕೆ ದೀದಿ ಸಮರ್ಥವಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಘಟನೆ ಅಮಾನವೀಯ. ಪಶ್ಚಿಮ ಬಂಗಾಳದಲ್ಲಿ ದೀದಿ ಗೆಲ್ಲಬೇಕು. ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ವೆಸ್ಟ್ ಬೆಂಗಾಲ್ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾಬಿನೆಟ್ನಲ್ಲಿರುವ ಆರು ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ನ್ಯಾಯಾಲಯಕ್ಕೆ ಹೋಗಿದ್ದ ಮೇಲೆ ಅವರ ಮೇಲೆ ಆಪಾದನೆ ಇದೆ ಎಂದರ್ಥ. ಅವರನ್ನು ತಕ್ಷಣ ಕ್ಯಾಬಿನೆಟ್ನಿಂದ ವಜಾ ಮಾಡಬೇಕು. ಇವರು ಕ್ಯಾಬಿನೆಟ್ನಲ್ಲಿ ಉಳಿಯಲು ಅರ್ಹರಲ್ಲ ಎಂದು ಕೋರ್ಟ್ ಮೊರೆ ಹೋದ ಸಚಿವರ ವಿರುದ್ಧ ಗುಡುಗಿದ್ದಾರೆ.