ಕಲಬುರಗಿ : ದೀಪದಿಂದ ಬೆಳಕು ಸಿಕ್ಕರೆ, ಸಂಗೀತದಿಂದ ನೆಮ್ಮದಿ: ಗಣಪತಿ ಸಿನ್ನೂರ್
ದೀಪದಿಂದ ಬೆಳಕು ಸಿಕ್ಕರೆ ಸಂಗೀತದಿಂದ ಮಾನಸಿಕ ನೆಮ್ಮದಿ ದೊರಕುವುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವಪೀಠದ ಸಂಯೋಜಕ ಡಾ. ಗಣಪತಿ ಸಿನ್ನೂರ್ ಅವರು ಹೇಳಿದರು.
ನಗರದ ಬಸವೇಶ್ವರ್ ಆಸ್ಪತ್ರೆ ಎದುರುಗಡೆಯಿರುವ ವಿದ್ಯಾನಗರ ವೆಲ್ಪೇರ್ ಸೊಸೈಟಿ ಸಮುದಾಯ ಭವನದಲ್ಲಿ ಹಮ್ಮಿಕೊಂಡ ದೀಪೋತ್ಸವ ಹಾಗು ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ಜೀವನದಶೈಲಿಯಲ್ಲಿ ಬದುಕುತ್ತಿರುವ ನಾವು ದೈಹಿಕ ಹಾಗು ಕೆಲಸದ ಒತ್ತಡದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ದೈಹಿಕವಾಗಿ ದಣಿದರೆ ವಿಶ್ರಾಂತಿಯಿಂದ ಪರಿಹಾರ ಕಂಡುಕೊಳ್ಳಬಹುದು, ಆದರೆ ಮಾನಸಿಕವಾಗಿ ದಣಿದರೆ ಇಂತಹ ಸಂಗೀತೋತ್ಸವ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದರು.
ಮಹಾತ್ಮಾ ಬಸವೇಶ್ವರ್ ಪೊಲೀಸ್ ಠಾಣೆಯ ಪೊಲೀಸ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ತಿಗಡಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಲ್ಲಿನಾಥ್ ದೇಶಮುಖ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಉಮೇರ್ಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ್ ಅಂಡಗಿ, ವಿಶ್ವನಾಥ್ ರಟಕಲ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಹಿರಿಯ ಕಲಾವಿದರಾದ ಬಸವರಾಜ್ ಸಾಲಿ ಅವರು ವಚನ ಗಾಯನ ಹಾಡುವ ಮೂಲಕ ಜನರ ಗಮನ ಸೆಳೆದರು. ಕಲಾವಿದರಾದ ಅಶ್ವಿನಿ ಹಿರೇಮಠ್, ರಾಜಕುಮಾರ್ ಹಿರೇಮಠ್, ವಿಠ್ಠಲಕುಮಾರ್ ಬಡಿಗೇರ್, ಮಡಿವಾಳ್ ಕಳಸ್ಕರ್ ಮುಂತಾದ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ನಂತರ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಿತು.
ಸೊಸೈಟಿ ಮುಖಂಡರಾದ ಸುಭಾಷ್ ಮಂಠಾಳೆ, ಶಿವಪುತ್ರಪ್ಪ ದಂಡೋತಿ, ಶಾಂತಯ್ಯ ಬೀದಿಮನಿ, ಮಹಾದೇವಪ್ಪ ಪಾಟೀಲ್, ನಾಗರಾಜ್ ಹೆಬ್ಬಾಳ್, ನಾಗಭೂಷಣ್ ಹಿಂದೊಡ್ಡಿ, ಗುರುಲಿಂಗಯ್ಯ ಮಠಪತಿ, ಆದಪ್ಪ ಸಿಕೇದ್, ನೀಲಪ್ಪ ದೋತ್ರಿ, ವೀರೇಶ್ ನಾಗಶೆಟ್ಟಿ, ಕರಣಕುಮಾರ್ ಆಂದೋಲಾ, ಅಮಿತ್ ಜೀವಣಗಿ, ಶಶಿಧರ್ ಪ್ಯಾಟಿ, ಸಂಜು ತಂಬಾಕೆ ಮುಂತಾದವರು ಉಪಸ್ಥಿತರಿದ್ದರು.