ಬೀದರ : ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ: ಅಜೀಜ್ ಖಾನ್
ಬೀದರ : ನಗರದ ಮೈಲೂರ ಕ್ರಾಸ ಮಹಾಲಕ್ಷ್ಮಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾಣಿ ಕನ್ನಡ ದಿನ ಪತ್ರಿಕೆ ಮೊದಲನೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಜಾಸ್ಮೀನ್ ಗ್ರೂಪ್ ಆಫ್ ಇನ್ಸ್‍ಟಿಟ್ಯೂಟ್ ಬೀದರನ ಅಧ್ಯಕ್ಷರಾದ ಅಜೀಜ್ ಖಾನ್ ಚಾಲನೆ ನೀಡಿ ಮಾತನಾಡಿದ ಅವರು, ಆಶೀರ್ವಾದ ವಾಣಿ ಕನ್ನಡ ದಿನ ಪತ್ರಿಕೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಜೈಕುಮಾರ ಹಾಗೂ ಅವರ ಧರ್ಮಪತ್ನಿ ಸುಧಾರಾಣಿ ಜೈಕುಮಾರ ಅವರನ್ನು ಶುಭಹಾರೈಸಿದರು.
ದಿನ ನಿತ್ಯ ಆಗುಹೋಗುಗಳ ಕುರಿತು, ಪ್ರಗತಿ ಪರ ಕೆಲಸಗಳ ಕುರಿತು ಪತ್ರಿಕೆ ಮೂಲಕ ಜನರಿಗೆ ಸುದ್ದಿ ಮುಟ್ಟಿಸುವ ಕಾರ್ಯವನ್ನು ದಿನ ಪತ್ರಿಕೆಗಳು ಮಾಡುತ್ತಿವೆ, ಅದರಲ್ಲಿ ಆಶೀರ್ವಾದ ವಾಣಿ ಕನ್ನಡ ದಿನ ಪತ್ರಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು,
ಸುಧಾರಾಣಿ ಸಾರಥ್ಯದಲ್ಲಿ ಆಶೀರ್ವಾದ ವಾಣಿ ಕನ್ನಡ ದಿನ ಪತ್ರಿಕೆ, ಬೀದರ 1ನೇ ವಾರ್ಷಿಕೋತ್ಸವ ಆಚರಿಸುತ್ತಿದೆ. ಪತ್ರಿಕೆ ನಡೆಸುವುದು ಸುಲಭದ ಮಾತಲ್ಲ ಸ್ಥಳೀಯ ಪತ್ರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.iÁನ್ಯರೆ.
ಈ ಕಾರ್ಯಕ್ರಮದಲ್ಲಿ ಜಾನವೆಸ್ಲಿ ಮೆಥೋಡಿಸ್ಟ್ ಚರ್ಚ್ ಟಿ.ಡಿ.ಬಿ. ಕಾಲೋನಿ, ಬೀದರನ ಸಭಾಪಾಲಕರಾದ ಪಿ. ಅನೀಲ ಕುಮಾರ ಅವರು ವಿಶೇಷ ಪ್ರಾರ್ಥನೆಯನ್ನು ನಡೆಸಿಕೊಟ್ಟರು.
ಆರ್ಶೀವಾದ ವಾಣಿ ಕನ್ನಡ ದಿನ ಪತ್ರಿಕೆ ತೆಗೆಯಬೇಕಾದರೆ ಹತ್ತಾರು ಕಷ್ಟಗಳನ್ನು ಜೈಕುಮಾರ ಹಾಗೂ ಅವರ ಕುಟುಂಬಸ್ತರು ಎದುರಿಸಬಹುದು ಆದರೆ ದೇವರ ಆಶೀರ್ವಾದದಿಂದ ಆಶೀರ್ವಾದ ವಾಣಿ ಕನ್ನಡ ದಿನ ಪತ್ರಿಕೆ ಹೊರಹೊಮ್ಮಿ ಇವತ್ತು ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಕಾರಣವಾಗಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಧ್ಯಕ್ಷರಾದ ಅಶೋಕ ಕುಮಾರ ಕರಂಜಿ ಅವರು ಮಾತನಾಡಿ, ಪತ್ರಿಕಾ ರಂಗದಲ್ಲಿ ನಾನು ದುಡ್ಡುಗಳಿಸಬೇಕೆಂದು ಬಂದರೆ ಯಾರಿಂದಲು ಸಾಧ್ಯವಾಗುವುದಿಲ್ಲ, ಮೊದಲು ಸೇವಾ ಮನೋಭಾವ ದಿಂದ ಸಮಾಜದ ಹಿತ ದೃಷ್ಟಿಯಿಂದ ಒಳ್ಳೆಯ ಸುದ್ದಿಗಳನ್ನು ಬಿತ್ತರಿಸುವ ಮೂಲಕ ತಮ್ಮ ಪತ್ರಿಕೆಯ ಛಾಪನ್ನು ಮೂಡಿಸಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ ಅವರು ಮಾತನಾಡಿ, ಸಮಾಜದಲ್ಲಿ ನಾವೆಷ್ಟೆ ಬೇಳೆದರು ಸಹ ನಮ್ಮ ತಂದೆ-ತಾಯಿಯನ್ನು ಸ್ಮರಿಸಬೇಕು, ನಮಗೆ ಬೆಳೆಯಲು ಪ್ರೇರಣೆಯಾದವರನ್ನು, ಮಾರ್ಗದರ್ಶಕರನ್ನು ಗೌರವಿಸಬೇಕು,ಅಂತಹ ಮನೋಭಾವವನ್ನು ಜೈಕುಮಾರ ಅವರು ಹೊಂದಿದ್ದಾರೆ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಅಮೃತರಾವ ಚಿಮಕೋಡೆ ಅವರು ಮಾತನಾಡಿ, ಸಣ್ಣ ಸಣ್ಣ ಪತ್ರಿಕೆ ಅಂದರೆ ಸ್ಥಳಿಯ ಪತ್ರಿಕೆಗಳನ್ನು ಹೆಚ್ಚಾನು ಹೆಚ್ಚು ಓದಬೇಕು, ಓದಿ ಬೆಳೆಸಬೇಕು ಎಂದರು.
ಹಿರಿಯ ಮುಖಂಡರಾದ ರಾಜು ಕಡ್ಯಾಳ ಅವರು ಮಾತನಾಡಿ, ಜ್ಞಾನಾರ್ಜನೆಗಾಗಿ ಎಲ್ಲರು ಪತ್ರಿಕೆಗಳನ್ನು ಓದಬೇಕು, ಸ್ಥಳಿಯ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಶೀರ್ವಾದ ವಾಣಿ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಸುಧಾರಾಣಿ ಜೈಕುಮಾರ ಅವರು ಮಾತನಾಡಿ, ಪತ್ರಿಕೆ ಎಂಬುವುದು ಸಮಾಜದ ಬಹಳ ಮುಖ್ಯ ಭಾಗವಾಗಿದೆ,ಸಮಾಜದಲ್ಲಿ ಅತ್ಯಾಚಾರಕ್ಕೆ, ದೌರ್ಜನ್ಯಕ್ಕೆ, ಅನ್ಯಾಯಕ್ಕೆ ಒಳಗಾದವರ ಪ್ರತಿ ಧ್ವನಿ ಎತ್ತುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತವೆ ಎಂದರು.
ಸುನೀಲ್‍ಕುಮಾರ ಕುಲ್ಕರ್ಣಿ ಬೀದರ ಎಕ್ಸ್‍ಪ್ರೆಸ್ ಸಂಪಾದಕರು, ಭೀಮಣ್ಣ ಬಿದರಕರ್, ಮಾಜೀದ ಬಿಲಾಲ್, ಮುಖೇಶ್ ಗಂಗೆನೋರ್, ಮೊಜಸ್ ನಿರ್ಣಾಕರ್, ಕಿಟ್ಟು ಮಾಳಗೆ,ಕುಮಾರಿ ವೀಣಾ ದೇವಿದಾಸ,ಜಗದೇವಿ ನಾರಾಯಣ, ಇಮ್ಯಾನುವೇಲ್ ಮುಕ್ತಿರಾಮ ನರಸಿಂಗ್, ರಾಮಣ್ಣ ಗುಂಡಪ್ಪಾ,ಕುಮಾರಿ ಸುಶ್ಮಿತಾ ಮೋರೆ,ಯುವ ಮುಖಂಡರಾದ ತುಕಾರಾಮ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಪ್ರಾರ್ಥನೆ ಗೀತೆ ಮತ್ತು ನಾಡಗೀತೆಯನ್ನು ಜಾನ್‍ಸನ್ ಡೊಂಗರಗಿ ತಂಡದವರು ಮತ್ತು ಕುಮಾರಿ ವೀಣಾ ದೇವದಾಸ ಅವರು ನಡೆಸಿಕೊಟ್ಟರು,ನಿರೂಪಣೆಯನ್ನು ಕುಮಾರಿ ಸುಶ್ಮಿತಾ ಮೋರೆ ಅವರು ನಡೆಸಿಕೊಟ್ಟರು,ವಂದನಾರ್ಪಣೆಯನ್ನು ವೈ.ಬಿ.ಜೈಶೀಲ್ ಅವರು ನಡೆಸಿಕೊಟ್ಟರು. ಯುವ ಮುಖಂಡರಾದ ಶ್ರೀ ಹಣಮಂತ ಘೋಡೆ, ಸಮಾಜ ಸೇವಕರಾದ ಎಂ.ಡಿ. ಜಾಕೀರ್,ಅಕ್ಷಾ ವೆಲ್‍ಫೇರ್ ಸೋಸೈಟಿ ಬೀದರನ ಅಧ್ಯಕ್ಷರಾದ ಶ್ರೀಮತಿ ಸುನೀತಾ ಆನಂದ, ಆನಂದ ಯೇಸುದಾಸ ಇದ್ದರು.