ಬೆಂಗಳೂರಲ್ಲೂ ಕಾಡ್ತಿದೆ ‘ಮಹಾ’ ಭಯ..! ಹೊಸ ಗೈಡ್​ಲೈನ್ಸ್ ರಿಲೀಸ್ ಮಾಡಿದ ಸರ್ಕಾರ..!

ರಾಜ್ಯದಲ್ಲಿ ಕೊರೋನಾ ಸೈಲೆಂಟ್ ಆಗಿ ವೈಲೆ‌ಂಟ್​ ಆಗ್ತಿದೆ. ಮಾರ್ಚ್‌ನಲ್ಲಿ ಎರಡನೇ ಅಲೆ ಆರಂಭವಾಗುವ ಮುನ್ಸೂಚನೆ ಸಿಗ್ತಿದ್ದು, ಕಳೆದ ತಿಂಗಳಿಗಿಂತ ಈ ಮಾರ್ಚ್ ಆರಂಭದಲ್ಲೇ ಕೊರೋನಾ ಕೇಸ್‌ಗಳ ಪಾಸಿಟಿವಿಟಿ ರೇಟ್ ಜಾಸ್ತಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಗೈಡ್​​ಲೈನ್ಸ್​ ರಿಲೀಸ್ ಮಾಡಿದೆ.

ದಿನದಿಂದ ದಿನಕ್ಕೆ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಜನವರಿಗಿಂತ ಫೆಬ್ರವರಿ, ಫೆಬ್ರವರಿಗಿಂತ ಮಾರ್ಚ್​ನಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ ಮೈ ಮರೆತರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ. ಅದ್ಯಾವಾಗ ಸರ್ಕಾರ ಲಾಕ್​ಡೌನ್ ಅನ್ನು ಅನ್ ಲಾಕ್ ಮಾಡ್ತೋ ಅಂದೇ ಜನರು ಬೇಕಾಬಿಟ್ಟಿ ಓಡಾಡೋಕೆ ಶುರುಮಾಡಿದ್ದಾರೆ. ಕೊರೋನಾ ಇದೆ. ಆದ್ರೂ ಓಡಾಡೋಕೆ ಅನುಮತಿ ಕೊಡ್ತಿದ್ದೀವಿ ಅಂತ ಹೇಳಿದರೂ ಜನ ಮಾತ್ರ ಯಾವುದಕ್ಕೂ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಈಗ ಅದರ ಪರಿಣಾಮ ಮತ್ತೊಮ್ಮೆ ಕೊರೋನಾದ ರಣಕೇಕೆಗೆ ಸಾಕ್ಷಿಯಾಗುವಂತೆ ಮಾಡ್ತಿದೆ.

ದಿನೇ ದಿನೇ ಹೆಚ್ಚುತ್ತಿರೋ ಕೇಸ್​ಗಳನ್ನ ಕಂಡ ರಾಜ್ಯ ಸರ್ಕಾರ ಕೂಡಾ ಇದೀಗ ಹೊಸ ಗೈಡ್​ಲೈನ್ಸ್ ರಿಲೀಸ್ ಮಾಡಿದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 40 ಸಾವಿರ ಟೆಸ್ಟ್ ಮಾಡಬೇಕು. ಬೆಂಗಳೂರು, ಬಳ್ಳಾರಿ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಬೀದರ್, ಉಡುಪಿ, ಕಲಬುರ್ಗಿ, ತುಮಕೂರು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳಬೇಕು. ಬೆಂಗಳೂರು ಗ್ರಾಮಾಂತರದಲ್ಲಿ RTPCR ಟೆಸ್ಟ್ ಹೆಚ್ಚಳ ಮಾಡಬೇಕು. ಸೋಂಕಿತರ ಸಂಪರ್ಕ ಕಾರ್ಯ 1:20 ಇರಬೇಕು.


ಮದುವೆ, ಸಭೆ ಸಮಾರಂಭಗಳಿಗೂ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ಮದುವೆಗೆ ತೆರೆದ ಪ್ರದೇಶಲ್ಲಿ 500 ಜನರಿಗೆ, ಸಭಾಂಗಣ, ಹಾಲ್, ಮುಚ್ಚಿದ ಪ್ರದೇಶದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬರ್ತ್​​ಡೇ ಇತರೆ ಆಚರಣೆಯಲ್ಲಿ ತೆರೆದ ಪ್ರದೇಶದಲ್ಲಿ 100 ಜನ, ಮುಚ್ಚಿದ ಪ್ರದೇಶ, ಹಾಲ್‌ಗಳಲ್ಲಿ 50 ಜನರಿಗೆ ಮಾತ್ರ ಅವಕಾಶ. ಅಂತ್ಯಕ್ರಿಯೆಗಳಿಗೆ ತೆರೆದ ಪ್ರದೇಶದಲ್ಲಿ 100, ಮುಚ್ಚಿದ‌ ಪ್ರದೇಶದಲ್ಲಿ 50 ಮಂದಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ರಾಜಕೀಯ ಆಚರಣೆ ಹಾಗೂ ಸಮಾರಂಭದಲ್ಲಿ 500 ಜನರಿಗೆ ಮಾತ್ರ ಅವಕಾಶ ನೀಡಿ ಸರ್ಕಾರ ಆದೇಶ ನೀಡಿದೆ.

ಒಟ್ಟಾರೆಯಾಗಿ ಕೊರೋನಾ ಎರಡನೇ ಅಲೆ ಭೀತಿ ಈಗ ಸಿಲಿಕಾನ್ ಸಿಟಿಗೆ ಎದುರಾಗಿದೆ. ಮೈಮರೆತರೆ ಮತ್ತೊಮ್ಮೆ ಸಂಕಷ್ಟ, ಮತ್ತೊಮ್ಮೆ ಲಾಕ್ ಡೌನ್. ಅಲ್ಲಿಗೆ ಮೊದಲ ಸುತ್ತಿ‌ನ ಕೊರೋನಾ ಕಾಲದ ಪರದಾಟ ಎದುರಾಗಬಹುದು. ಯಾವುದು ಬೇಕು ಅನ್ನೋದು ಈಗ ಜನರ ಮುಂದಿರೋ ಆಯ್ಕೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *