ರಮೇಶ್​ ​ ಜಾರಕಿಹೊಳಿ ಸಿಡಿ ಪ್ರಕರಣ, ಯುವತಿ ಅರೆಸ್ಟ್​ ..!

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧಿಸಿದಂತೆ ಎಸ್​ಐಟಿ ತಂಡ ತನಿಖೆ ನಡೆಸಿದ್ದು, ಈ ಕುರಿತು ಓರ್ವ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ.ಯುವತಿ ಜೊತೆ ಇಬ್ಬರು ವ್ಯಕ್ತಿಗಳನ್ನು ಸಹ ಎಸ್​ಐಟಿ ತಂಡ ವಶಕ್ಕ ಪಡೆದಿದ್ದಾರೆ. ಸಿಡಿ ವಿಚಾರವಾಗಿ ವ್ಯಕ್ತಿ ಹಾಗೂ ಯುವತಿಯನ್ನ ಎಸ್​ಐಟಿ ತಂಡ ವಿಚಾರಣೆ ನಡೆಸಿದ್ದಾರೆ.

 

ಈ ವರೆಗೆ ಸಿಡಿ ಕೇಸ್​ ಬಗ್ಗೆ ಎಫ್​ಐಆರ್ ದಾಖಲಾಗಿಲ್ಲ ಹೀಗಾಗಿ, ಫೀಲ್ಡ್​ಗೆ ಇಳಿಯೋ ಎಸ್​ಐಟಿ, ಸಿಡಿಯ ಅಸಲಿಯತ್ತಿನ ಬಗ್ಗೆ ಎಸ್​ಐಟಿ ತನಿಖೆ ನೆಡಿಸಿ , ಈ ಪ್ರಾಥಮಿಕ ತನಿಖೆಯನ್ನ ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ತನಿಖೆಗೆ ಭಾಗವಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಿ, ನಂತರ ನಾಪತ್ತೆಯಾದ ಯುವತಿಯನ್ನ ಪತ್ತೆ ಮಾಡಿ , ಯುವತಿ ಹಿಂದೆ ಯಾರಿದ್ದಾರೆ ಎಂಬುದನ್ನ ಪತ್ತೆ ಮಾಡಿಲಿದೆ. ಅವರ ಹೇಳಿಕೆ ನಂತ್ರ , ಎಫ್​ಎಸ್​ಎಲ್​ನಿಂದ ಸಿಡಿ ಬಗ್ಗೆ ವರದಿ ಪಡೆಯಲಿರೋ ಎಸ್​ಐಟಿ, ಸಿಡಿ ವೀಕ್ಷಿಸಿ , ನೈಜತೆ , ಸತ್ಯಾಸತ್ಯತೆಯ ಶೋಧನೆ ನಡೆಸಿ. ಸಿಡಿ ವೀಕ್ಷಣೆ ಬಳಿಕ ಸಿಕ್ಕ ಮಾಹಿತಿ ಆಧರಿಸಿ ಮುಂದಿನ ತಿರುವು ಪಡೆದುಕೊಳ್ಳುವುದಾಗಿ ಈ ಹಿಂದೆ ತಿಳಿದುಬಂದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಬೆಳೆವಣಿಗೆ ನಡೆದಿದ್ದು, ಈ ವರೆಗೆ ಮೂವರನ್ನ ಎಸ್​ಐಟಿ ವಿಶೇಷ ತಂಡ ವಶಕ್ಕೆ ಪಡೆದಿದೆ. ಇಬ್ಬರು ಯುವಕರು ಹಾಗೂ ಯುವತಿಯನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಚಿಕ್ಕಮಗಳೂರಿನಲ್ಲಿ ಒಬ್ಬ ವ್ಯಕ್ತಿಯನ್ನ ಹಾಗೂ ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿ ಹಾಗೂ ಯುವತಿಯನ್ನ ಎಸ್​ಐಟಿ ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಆಡುಗೋಡಿಯಲ್ಲಿ ವಿಚಾರಣೆ ನಡೆಸಿದ್ದಾರೆ. ದಿನೇಶ್​ ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ವ್ಯಕ್ತಿ ಹಾಗೂ ಮತ್ತೊಬ್ಬ ಆ ವಿಡಿಯೋದಲ್ಲಿದ್ದ ಯುವತಿಯ ಜೊತೆ ಸಂಪರ್ಕದಲ್ಲಿ ಇದ್ದ ವ್ಯಕ್ತಿ ಅಂತ ತಿಳಿದುಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *